Index   ವಚನ - 217    Search  
 
ಮಹಾರಾಜನನೆಲ್ಲರೂ ಬಲ್ಲರು. ಆ ರಾಜನು ಆರನೂ ಅರಿಯನು. ಅರಿಯನಾಗಿ. ಪದವಿಲ್ಲ ಫಲವಿಲ್ಲ ಭೋಗವಿಲ್ಲ ಪರಿಣಾಮವಿಲ್ಲ. ಮಹಾರಾಜಾಧಿರಾಜ ಶಿವನನೆಲ್ಲರೂ ಬಲ್ಲರು. ಆ ಶಿವನು[ಆರನೂ] ಅರಿಯನು, ಅರಿಯನಾಗಿ ಪದವಿಲ್ಲ ಭೋಗವಿಲ್ಲ ಪರಿಣಾಮವಿಲ್ಲ. ಇದು ಕಾರಣ, ಶಿವನನರಿದ ಸದ್ಭಕ್ತರ ಸಂಗದಿಂದ ಆ ಮಹಾಶಿವನು ತನ್ನನು ಅರಿವಂತೆ ಮಾಡಿಕೊಂಡನಾಗಿ ಪದ ಫಲ ಭೋಗ ಪರಿಣಾಮ ಮತ್ತೆ ಉಂಟೇ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.