ಮೂರು ಮಲ ಮೊದಲಾದ ಸಂಸಾರ ಸಂಗವ ಬಿಟ್ಟು,
ಮೂರು ಬಾಳಿನ ಭೇದವ ತಿಳಿದು,
[ಅಂಗ ಲಿಂ]ಗ ಸಂಬಂಧವನರಿದು,
ಅಂಗ ಲಿಂಗ ಪ್ರಮಾಣವ ಕಂಡು,
ಅಂಗಕ್ಕೊಂದು ಕಾಶಾಂಬರದ ಕೌಪು,
ಕಪ್ಪಡ ಕಂಬಳಿಯ ಕಟ್ಟಿಹೊದ್ದು,
ಲಿಂಗಕ್ಕೊಂದು ಶಿವದಾರ ಸೆಜ್ಜೆ ಸಿಂಹಾಸನವನಿಕ್ಕಿ,
ಮೇಲು ವಸ್ತ್ರವ ಕಟ್ಟಿ,
ಶ್ರೀ ರುದ್ರಾಕ್ಷಿ ಭಸ್ಮಾಧಾರವನಳವಡಿಸಿಕೊಂಡು,
ಶಿವಮಂತ್ರ ಸಂಬಂಧಿ[ಯಾ]ಗಿ,
ತ್ರಿಕಾಲಲಿಂಗಾರ್ಚನೆಯಂ ಮಾಡಿ,
ಲಿಂಗಭಕ್ತರ ಮನೆಗೆ ಹೋಗಿ,
`ಲಿಂಗಾರ್ಪಿತ ಭಿಕ್ಷಾ'ಯೆಂದು ಬೇಡಿ,
ಲಿಂಗಾಣತಿಯಿಂದ ಬಂದ [ಪದಾರ್ಥವ]
ಕರಪಾತ್ರೆಯ ನಿರುತತ್ವದಿಂ ಕೈಕೊಂಡು ಭೋಗಿಸುವಲ್ಲಿ,
ಲಿಂಗದ ವಸ್ತ್ರವ ಬಿಟ್ಟು ಕಟ್ಟಿ,
ಲಿಂಗನಿರೀಕ್ಷಣೆಯಿಂದ ಲಿಂಗಾರ್ಪಣ ಪ್ರಸಾದಭೋಗ.
ಲಿಂಗದ ಆತ್ಯಾಶ್ರಮವನಾಶ್ರೈಸಿ,
ಲಿಂಗಧ್ಯಾನದಲ್ಲಿ ಲಿಂಗಪರಿಣಾಮಿಯಾಗಿ,
ಸದಾಕಾಲ ಸನ್ನಹಿತನಾಗಿಪ್ಪ ವಿರಕ್ತನಾದ
ಪರಜ್ಞಾನಿಯೆಂದಡೆ ಜನ್ಮಪವಿತ್ರ.
ಭಿಕ್ಷವ ನೀಡದಡೆ ಮಹಾಪುಣ್ಯ,
ಆತನ ದಿವ್ಯೋಪದೇಶವ ಕೇಳಿ ನಡೆದವರಿಗೆ ಜೀವನ್ಮುಕ್ತಿ,
ಆ ಮಹಾ[ಮಹಿಮ] ಮಾಡಿದುದು ಬ್ರಹ್ಮಾರ್ಪಣ. ಇದು ಸತ್ಯ,
ಶಿವ ಬಲ್ಲ ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Mūru mala modalāda sansāra saṅgava biṭṭu,
mūru bāḷina bhēdava tiḷidu,
[aṅga liṁ]ga sambandhavanaridu,
aṅga liṅga pramāṇava kaṇḍu,
aṅgakkondu kāśāmbarada kaupu,
kappaḍa kambaḷiya kaṭṭihoddu,
liṅgakkondu śivadāra sejje sinhāsanavanikki,
mēlu vastrava kaṭṭi,
śrī rudrākṣi bhasmādhāravanaḷavaḍisikoṇḍu,
śivamantra sambandhi[yā]gi,
trikālaliṅgārcaneyaṁ māḍi,Liṅgabhaktara manege hōgi,
`liṅgārpita bhikṣā'yendu bēḍi,
liṅgāṇatiyinda banda [padārthava]
karapātreya nirutatvadiṁ kaikoṇḍu bhōgisuvalli,
liṅgada vastrava biṭṭu kaṭṭi,
liṅganirīkṣaṇeyinda liṅgārpaṇa prasādabhōga.
Liṅgada ātyāśramavanāśraisi,
liṅgadhyānadalli liṅgapariṇāmiyāgi,
sadākāla sannahitanāgippa viraktanāda
parajñāniyendaḍe janmapavitra.
Bhikṣava nīḍadaḍe mahāpuṇya,Ātana divyōpadēśava kēḷi naḍedavarige jīvanmukti,
ā mahā[mahima] māḍidudu brahmārpaṇa. Idu satya,
śiva balla śivanāṇe, uriliṅgapeddipriya viśvēśvarā.