ಲಿಂಗವಂತನು ಲಿಂಗಾಚಾರ,
ಸದಾಚಾರ,
ಭೃತ್ಯಾಚಾರ, ಗಣಾಚಾರ, ಶಿವಾಚಾರ,
ಸರ್ವಾಚಾರಸಂಪನ್ನನೆನಿಸಿಕೊಳಬಹುದಲ್ಲದೆ
ಭಕ್ತನೆನಿಸಿಕೊಳಬಾರದು.
ಅನೇಕ ವ್ರತನಿಯಮಂಗಳ ಹಿಡಿದು ನಡೆದು
ವ್ರತಸ್ಥನೆನಿಸಿಕೊಳಬಹುದಲ್ಲದೆ
ಭಕ್ತನೆನಿಸಿಕೊಳಬಾರದು.
ಕರುಣಿ ಶಾಂತ ನಿಸ್ಪೃಹನೆನಿಸಿಕೊಳಬಹುದಲ್ಲದೆ
ಭಕ್ತನೆನಿಸಿಕೊಳಬಾರದು.
ತನುವ ಕೊಟ್ಟು, ಮನವ ಕೊಟ್ಟು, ಧನವ ಕೊಟ್ಟು
ದಾತೃವೆನಿಸಿಕೊಳಬಹುದಲ್ಲದೆ.
ಭಕ್ತನೆನಿಸಿಕೊಳಬಾರದು.
`ಏಕ ಮೂರ್ತಿಸ್ತ್ರಿಧಾ ಭೇದಾ' ಎಂಬ ಕ್ರಿಯೆಯಲ್ಲಿ
ಶ್ರೀಗುರುಲಿಂಗಜಂಗಮವೊಂದೆಯೆಂದು
ಸದ್ಭಾವದಿಂ ತ್ರಿವಿಧದಲ್ಲಿ, ಆ ಮುಖವೊಂದೊಂದರಲ್ಲಿ
ತ್ರಿವಿಧವನೂ ಏಕೀಭವಿಸಿ ಕಂಡು
ಕಾಲಕರ್ಮಕಲ್ಪಿತ ಉಪಾಧಿರಹಿತನಾಗಿ
ಆ ವಸ್ತುಗಳ ಮನೋವಾಕ್ಕಾಯದಲ್ಲಿ ಇಚ್ಚೈಸುತ್ತಂ
ತನ್ನ ಮನೋವಾಕ್ಕಾಯದಲ್ಲಿ ತಡವಿಲ್ಲದೆ [ನೆಲೆಗೊಳಿಸಬೇಕು]
`ನ ಗುರೋರಧಿಕಂʼ `ಗುರುಣಾ ದೀಯತೇ ಲಿಂಗಂʼ
`ಗುರುಃ ಪಿತಾ ಗುರುರ್ಮಾತಾʼ
ಎಂದುದಾಗಿ,
ದೀಕ್ಷಾಮೂರ್ತಿರ್ಗುರುರ್ಲಿಗಂ ಪೂಜಾಮೂರ್ತಿಸ್ಸದಾಶಿವಃ|
ಶಿಕ್ಷಾಮೂರ್ತಿಶ್ಚರಸ್ತಸ್ಮಾತ್ ಏವಂ ಭೇದತ್ರಯೋ ಭವೇತ್||
ದೀಕ್ಷಾ ಪೂಜಾ ಚ ಶಿಕ್ಷಾ ಚ ಸರ್ವಕರ್ತಾ ಚ ಜಂಗಮಃ|
ಎಂದುದಾಗಿ,
`ಭಕ್ತ್ಯಾಪೂಜಾಂ ಅಹಂ ಕರ್ತಾ'
`ನಿಷ್ಪ್ರಪಂಚೋ ನಿರಾಮಯಃ'
ಎಂದುದಾಗಿ,
ಪ್ರಪಂಚಯುಕ್ತೋ ದಾಸೋಹೀ ನಿಷ್ಪ್ರಪಂಚೋ ಹಿ ಜಂಗಮಃ|
ಪ್ರಪಂಚಯುಕ್ತೋ ಭಕ್ತಸ್ಸ್ಯಾತ್ ನಿಷ್ಪ್ರಪಂಚೋ ಹಿ ಜಂಗಮಃ||
ಎಂದುದಾಗಿ,
ಸರ್ವಶಕ್ತಿಮಯಃ ಪ್ರೋಕ್ತಃ ಪುರುಷ ಏಕಶ್ಶಿವಸ್ತಧಾ|
ಭಕ್ತಿಪ್ರಸನ್ನಸ್ಸರ್ವೇಷಾಂ ಯಥಾ ಭಕ್ತಿಸ್ತಥಾ ಶಿವಃ||
ಸಕಲಶ್ಶಕ್ತಿರೂಪಶ್ಚ ಶಿವ ಏಕೋ ನಿಷ್ಕಲಸ್ತಥಾ|
ಶಕ್ತ್ಯಧೀನಃ ಪ್ರಪಂಚಸ್ಸ್ಯಾದ್ಯಥಾಭಕ್ತಿಸ್ಸ್ತಥಾ ಶಿವಃ||
ಗುರುಣಾ ಭಾವಿತಂ ಲಿಂಗಂ ಏಕಮೇವಾದ್ವಿತೀಯಕಂ|
ತಲ್ಲಿಂಗಸ್ಯ ಪ್ರಭಾ ಲಿಂಗಂ ಸರ್ವಲಿಂಗಂ ನ ಸಂಶಯಃ||
`ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ಎಂದುದಾಗಿ,
`ಏವ ಏಕೋ ಧ್ಯೇಯಃ' ಎಂದುದಾಗಿ
`ಅಣೋರಣೀಯಾನ್ಮಹತೋ ಮಹೀಯಾನ್' ಎಂದುದಾಗಿ
ಸರ್ವಶಕ್ತಿಮಯಂ ಪ್ರೋಕ್ತಂ ಪುರುಷಮೇಕಂ ಶಿವಸ್ತಥಾ|
ಯಥಾ ಶಕ್ತಿಶ್ಚ ಸಂಯೋಗಂ ತಥಾ ತತ್ತ್ವಂ ಪರಶ್ಶಿವಃ||
ಸರ್ವೇಷಾಂ ಶಕ್ತಿರೂಪಂ ಚ ಪುರುಷಾದ್ವೈತಂ ಪರಶಿವಃ|
ಯಥಾಶಕ್ತಿಸ್ಸ್ತಥಾ ಪುರುಷ ಏಕ ರುದ್ರ ಇತಿ ಸ್ಮೃತಃ||
ಎಂದುದಾಗಿ,
ಯಸ್ಯ ಚಿತ್ತಂ ಶಿವೇ ಲೀನಂ ತಸ್ಯ ಜಾತ್ಯಾದಿ ನ ಸ್ಮರೇತ್|
ಶಿವಲಿಂಗೇ ಶಿಲಾಬುದ್ಧಿಂ ಕುರ್ವಾಣ ಇವ ಪಾತಕೀ||
ಸತ್ಯಭಾವಿ ಮಹತ್ಸತ್ಯಂ ಸತ್ಯಂ ಸ್ಯಾಚ್ಚಿವಲಕ್ಷಣಂ|
ನಿತ್ಯಭಾವಿ ಮಹನ್ನಿತ್ಯಂ ಸತ್ಯಂ ಸ್ಯಾಚ್ಚಿವಲಕ್ಷಣಂ||
ನಾನಾರೂಪಧರೋ ದೇವೋ ನಾನಾರೂಪಸಮನ್ವಿತಃ|
ನಾನಾಚಿಹ್ನಸಮೋಪೇತೋ ನಾನಾಲೀಲಾಧರೋ ಹರಃ||
ವೇದಾತೀತಂ ಮನೋತೀತಮಾಗಮಾತೀತಮಾರ್ಗಿಕಂ|
ಶಾಸ್ತ್ರಾತೀತಂ ಮಹಾಶಾಸ್ತ್ರೀ ತತ್ಸ್ಯಾಜ್ಜಂಗಮಲಕ್ಷಣಂ||
ಲಿಂಗಧಾರೀ ಮಹಾಲಿಂಗೀ ಲಿಂಗಧ್ಯಾನೀ ನಿರಂತರಂ|
ಲಿಂಗಾಲಿಂಗೀ ಮಹತ್ಸಂಗೀ ತತ್ಸ್ಯಾಜ್ಜಂಗಮಲಕ್ಷಣಂ||
ಜಂಗಮೋ ಜಂಗಮಂ ದಃಷ್ಟ್ವಾ ನಮಸ್ಕಾರಂ ತು ಸಂಭ್ರಮಾತ್|
ಆಲಿಂಗನಂ ಮಹಾಪ್ರೀತ್ಯಾ ಕುರ್ಯಾಜ್ಜಂಗಮಲಕ್ಷಣಂ||
ಭೃತ್ಯಪೂಜಾರ್ಹಕರ್ತಾ ಚ ದೀಕ್ಷಾಮೂರ್ತಿರ್ಮಹಾಪ್ರಭುಃ|
ಶಿಕ್ಷಾಮೂರ್ತಿರ್ಮಹಾಕರ್ತಾ ತತ್ಸ್ಯಾಜ್ಜಂಗಮಲಕ್ಷಣಂ||
ಸರ್ವಸಂಗಪರಿತ್ಯಾಗೀ ಲಿಂಗಸಂಗೀ ನಿರಂತರಂ|
ದ್ವಂದ್ವೇ ತು ಸಮದೃಷ್ಟಿಸ್ಸ್ಯಾತ್ ತತ್ಸ್ಯಾಜ್ಜಂಗಮಲಕ್ಷಣಂ||
ಘೃಣಾದೃಷ್ಟಿರ್ಘೃಣಾವಾಕ್ಯಂ ಘೃಣಾಮೂರ್ತಿರ್ನಿರಂತರಂ|
ಕ್ರಿಯಾಕರ್ಮಸು ವಿಜ್ಞಶ್ಚ ಶಿಕ್ಷಾಚಾರ್ಯ ಇತಿ ಸ್ಮೃತಃ||
ಮೂರ್ತಿಶ್ಚ ಲಿಂಗಮೂರ್ತಿಶ್ಚ ಸುಶೀಲಂ ಲಿಂಗಶೀಲವತ್|
ಗುಣಂ ಸರ್ವಸ್ಯ ಲಿಂಗಸ್ಯ ತತ್ಸ್ಯಾಜ್ಜಂಗಮಲಕ್ಷಣಂ||
ಎಂದುದಾಗಿ,
ಹನ್ಯಾತ್‍ಕ್ರುದ್ಧೋಪಿ ಚಾಕಾಶಂ ಕ್ಷುಧಾರ್ತಾ ಖಾದಯೇತ್ತುಷಂ|
ತ್ಯಕ್ತ್ವಾ ಲಿಂಗಾರ್ಚನಂ ಮೂಢೋ ಮುಕ್ತ್ಯರ್ಥೀ ತ್ರಿತಯಂ ವೃಥಾ||
ಶ್ವಪಚೋsಪಿ ಮುನಿಶ್ರೇಷ್ಠಃ ಶಿವಭಕ್ತೋ ದ್ವಿಜಾಧಿಕಃ|
ಶಿವಭಕ್ತಿವಿಹೀನಸ್ತು ದ್ವಿಜೋsಪಿ ಶ್ವಪಚಾಧಮಃ||
ಸ ಲಿಂಗೀ ಸರ್ವದೈವಜ್ಞೋ ಯಸ್ಸ ಚಾಂಡಾಲವದ್ಭುವಿ|
ಲಿಂಗಾರ್ಚಕಸ್ತು ಶ್ವಪಚೋ ದ್ವಿಜಕೋಟ್ಯಾ ವಿಶಿಷ್ಯತೇ||
ಶಿವಧರ್ಮೇ,
ಉಪನೀತಸಹಸ್ರೇಭ್ಯೋ ಬ್ರಹ್ಮಚಾರೀ ವಿಶಿಷ್ಯತೇ|
ಬ್ರಹ್ಮಚಾರಿಸಹಸ್ರೇಭ್ಯೋ ವೇದಾಧ್ಯಾಯೀ ವಿಶಿಷ್ಯತೇ||
ವೇದಾಧ್ಯಾಯಿಸಹಸ್ರೇಭ್ಯಸ್ಸಾಗ್ನಿಹೊತ್ರೀ ವಿಶಿಷ್ಯತೇ|
ಅಗ್ನಿಹೋತ್ರಿಸಹಸ್ರೇಭ್ಯೊ ಯಜ್ಞಯಾಜೀ ವಿಶಿಷ್ಯತೇ||
ಯಜ್ಞಯಾಜಿಸಹಸ್ರೇಭ್ಯಃ ಸತ್ರಯಾಜೀ ವಿಶಿಷ್ಯತೇ|
ಸತ್ರಯಾಜಿಸಹಸ್ರೇಭ್ಯಃ ಸರ್ವವಿದ್ಯಾರ್ಥಪಾರಗಃ||
ಸರ್ವವಿದ್ಯಾರ್ಥವಿತ್ಕೋಟ್ಯಾ ಶಿವಭಕ್ತೋ ವಿಶಿಷ್ಯತೇ|
ಎಂದುದಾಗಿ,
ನಿಕೃಷ್ಟಾಚಾರಜನ್ಮಾನೋ ವಿರುದ್ಧಾಲೋಕವೃತ್ತಿಷು|
ಕೋಟಿಭ್ಯೋ ವೇದವಿದುಷಾಂ ಶ್ರೇಷ್ಠಾ ಮದ್ಭಾವಭಾವಿತಾಃ||
ಎಂದುದಾಗಿ,
ದೇಶಾಂತರ ಸಂಹಿತೆಯಲ್ಲಿ:
ಕ್ರಿಮಿಕೀಟಪತಂಗೇಭ್ಯಃ ಪಶವಃ ಪ್ರಜ್ಞಯಾಧಿಕಾಃ|
ಪಶುಭ್ಯೋsಪಿ ನರಾಶ್ರೇಷ್ಠಾಸ್ತೇಷು ಶ್ರೇಷ್ಠಾ ದ್ವಿಜಾತಯಃ||
ದ್ವಿಜಾತಿಷ್ವಧಿಕಾ ವಿಪ್ರಾ ವಿಪ್ರೇಷು ಕ್ರತುಬುದ್ಧಯಃ|
ಕ್ರತುಬುದ್ಧಿಷು ಕರ್ತಾರಸ್ತೇಭ್ಯಃ ಸನ್ಯಾಸಿನೋಧಿಕಾಃ||
ತೇಭ್ಯೋ ವಿಜ್ಞಾನಿನಃ ಶ್ರೇಷ್ಠಾಸ್ತೇಷು ಶಂಕರಪೂಜಕಾಃ|
ತೇಷು ಶ್ರೇಷ್ಠಾ ಮಹಾಭಾಗಾ ಮಮ ಲಿಂಗಾಂಗಸಂಗಿನಃ||
ಲಿಂಗಾಂಗಸಂಗಿಷ್ವಧಿಕಃ ಷಟ್‍ಸ್ಥಲಜ್ಞಾನವಾನ್ಪುಮಾನ್|
ತಸ್ಮಾದಪ್ಯಧಿಕೋ ನಾಸ್ತಿ ತ್ರಿಷು ಲೋಕೇಷು ಸರ್ವದಾ||
ಎಂದುದಾಗಿ,
ಭೋಗಮೂರ್ತಿರ್ಮಹಾಲಿಂಗಂ ಜಂಗಮಶ್ಚ ನ ಸಂಶಯಃ|
ಜಂಗಮೋ ಲಿಂಗರೂಪಂ ಚ ಸತ್ಯಂ ಸತ್ಯಂ ನ ಸಂಶಯಃ||
ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ|
ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್||
ಆಚಾರಶ್ಚ ಗುರುರ್ಲಿಂಗಂ ಜಂಗಮಶ್ಚ ಪ್ರಸಾದಕಃ|
ಪಂಚವಕ್ತ್ರಸಮಾಯುಕ್ತಂ ಮಹಾಲಿಂಗಸ್ಯ ಲಕ್ಷಣಂ||
ಜಂಗಮೋ ಲಿಂಗಮಾಚಾರೋ ಮಹಾಲಿಂಗಂ ಗುರುಸ್ತದಾ|
ಪಂಚವಕ್ತ್ರಸಮಾಯುಕ್ತಃ ಪ್ರಸಾದೋ ಲಿಂಗಲಕ್ಷಣಂ||
ಆಚಾರೋ ಗುರುಲಿಂಗಂ ಚ ಮಹಾಲಿಂಗಪ್ರಸಾದಕಂ|
ಪಂಚವಕ್ತ್ರಸಮಾಯುಕ್ತಂ ಸತ್ಯಂ ಜಂಗಮಲಕ್ಷಣಂ||
ಪ್ರಸಾದೋ ಜಂಗಮಶ್ಚೈವ ಆಚಾರೋ ಗುರುದೇವ ಚ|
ಮಹಾಲಿಂಗಸಮಾಯುಕ್ತಂ ಶಿವಲಿಂಗಸ್ಯ ಲಕ್ಷಣಂ||
ಜ್ಞಾನಾಚಾರೋ ಮಹಾಲಿಂಗಂ ಶಿವಲಿಂಗಂ ಚ ಜಂಗಮಃ|
ಪಂಚವಕ್ತ್ರಸಮಾಯುಕ್ತಂ ಇತ್ಯೇತೇ ಗುರುಲಕ್ಷಣಂ||
ಮಹಾಲಿಂಗಂ ಪ್ರಸಾದಶ್ಚ ಜಂಗಮೋ ಗುರುಲಿಂಗಕಂ|
ಪಂಚವಕ್ತ್ರಸಮಾಯುಕ್ತ ಆಚಾರೋ ಲಿಂಗಲಕ್ಷಣಂ||
ಅಂಗಮಾಚಾರಮಾಶ್ರಿತ್ಯ ಆಚಾರಃ ಪ್ರಾಣಮಾಶ್ರಿತಃ|
ತತ್ಪ್ರಾಣೋ ಶಿವಲಿಂಗ ಚ ತಲ್ಲಿಂಗಂ ಜಂಗಮಾಶ್ರಿತಂ||
ಇಂತೆಂದುದಾಗಿ,
ಕ್ಷಣದಲ್ಲಿ ಅರಿ ಲಿಂಗವನು,
ಕ್ಷಣಾರ್ಧದಲ್ಲಿ ಲಿಂಗವೂ ನಿನ್ನರಿವ.
ಕ್ಷಣಾರ್ಧದಲ್ಲಿ ಅರಿ ಭಕ್ತಕಾಯನೆಂದು.
ಪ್ರಾಣಲಿಂಗವೆಂದರಿದು
ಲಿಂಗವನು ಒಂದು ಕ್ಷಣದಲ್ಲಿ ಮರೆದಡೆ
ಕ್ಷಣಾರ್ಧದಲ್ಲಿ ಮರೆದಡೆ, ನಿನ್ನನೂ ಅಜ್ಞಾನಿಯ ಮಾಡಿ
ಆಯಸಂ ಬಡಿಸಿ ಆಸೆಗೆ ಒಪ್ಪಿಸಿ ಘಾಸಿಮಾಡದೆ ಬಿಡನು ಲಿಂಗವು.
ಕ್ಷಣಾರ್ಧದಲ್ಲಿ ಸರ್ವಪ್ರಪಂಚವೆಲ್ಲವನೂ ಮರೆದು
ನಿತ್ಯವಾಗಿ ಲಿಂಗವನರಿ ಮನವೆ.
ನಿರಂತರ ಲಿಂಗದಲ್ಲಿದ್ದು ಲಿಂಗವ ಹಾ[ಡೆ] ಸುಖಿಯಪ್ಪೆ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನೆ ಸಾಕ್ಷಿ.
Art
Manuscript
Music
Courtesy:
Transliteration
Liṅgavantanu liṅgācāra,
sadācāra,
bhr̥tyācāra, gaṇācāra, śivācāra,
sarvācārasampannanenisikoḷabahudallade
bhaktanenisikoḷabāradu.
Anēka vrataniyamaṅgaḷa hiḍidu naḍedu
vratasthanenisikoḷabahudallade
bhaktanenisikoḷabāradu.
Karuṇi śānta nispr̥hanenisikoḷabahudallade
bhaktanenisikoḷabāradu.
Tanuva koṭṭu, manava koṭṭu, dhanava koṭṭu
dātr̥venisikoḷabahudallade.
Bhaktanenisikoḷabāradu.
`Ēka mūrtistridhā bhēdā' emba kriyeyalli
śrīguruliṅgajaṅgamavondeyendu
sadbhāvadiṁ trividhadalli, ā mukhavondondaralli
trividhavanū ēkībhavisi kaṇḍu
kālakarmakalpita upādhirahitanāgi
ā vastugaḷa manōvākkāyadalli iccaisuttaṁ
tanna manōvākkāyadalli taḍavillade [nelegoḷisabēku]
`na gurōradhikaṁʼ `guruṇā dīyatē liṅgaṁʼ
`guruḥ pitā gururmātāʼ
endudāgi,
Dīkṣāmūrtirgururligaṁ pūjāmūrtis'sadāśivaḥ|
śikṣāmūrtiścarastasmāt ēvaṁ bhēdatrayō bhavēt||
dīkṣā pūjā ca śikṣā ca sarvakartā ca jaṅgamaḥ|
endudāgi,
`bhaktyāpūjāṁ ahaṁ kartā'
`niṣprapan̄cō nirāmayaḥ'
endudāgi,
prapan̄cayuktō dāsōhī niṣprapan̄cō hi jaṅgamaḥ|
prapan̄cayuktō bhaktas'syāt niṣprapan̄cō hi jaṅgamaḥ||
endudāgi,
Sarvaśaktimayaḥ prōktaḥ puruṣa ēkaśśivastadhā|
bhaktiprasannas'sarvēṣāṁ yathā bhaktistathā śivaḥ||
sakalaśśaktirūpaśca śiva ēkō niṣkalastathā|
śaktyadhīnaḥ prapan̄cas'syādyathābhaktis'stathā śivaḥ||
guruṇā bhāvitaṁ liṅgaṁ ēkamēvādvitīyakaṁ|
talliṅgasya prabhā liṅgaṁ sarvaliṅgaṁ na sanśayaḥ||
`ēka ēva rudrō na dvitīyāya tasthē' endudāgi,
`ēva ēkō dhyēyaḥ' endudāgi
`Aṇōraṇīyānmahatō mahīyān' endudāgi
sarvaśaktimayaṁ prōktaṁ puruṣamēkaṁ śivastathā|
yathā śaktiśca sanyōgaṁ tathā tattvaṁ paraśśivaḥ||
sarvēṣāṁ śaktirūpaṁ ca puruṣādvaitaṁ paraśivaḥ|
yathāśaktis'stathā puruṣa ēka rudra iti smr̥taḥ||
endudāgi,
yasya cittaṁ śivē līnaṁ tasya jātyādi na smarēt|
śivaliṅgē śilābud'dhiṁ kurvāṇa iva pātakī||
Satyabhāvi mahatsatyaṁ satyaṁ syāccivalakṣaṇaṁ|
nityabhāvi mahannityaṁ satyaṁ syāccivalakṣaṇaṁ||
nānārūpadharō dēvō nānārūpasamanvitaḥ|
nānācihnasamōpētō nānālīlādharō haraḥ||
vēdātītaṁ manōtītamāgamātītamārgikaṁ|
śāstrātītaṁ mahāśāstrī tatsyājjaṅgamalakṣaṇaṁ||
liṅgadhārī mahāliṅgī liṅgadhyānī nirantaraṁ|
liṅgāliṅgī mahatsaṅgī tatsyājjaṅgamalakṣaṇaṁ||
jaṅgamō jaṅgamaṁ daḥṣṭvā namaskāraṁ tu sambhramāt|
āliṅganaṁ mahāprītyā kuryājjaṅgamalakṣaṇaṁ||
Bhr̥tyapūjār'hakartā ca dīkṣāmūrtirmahāprabhuḥ|
śikṣāmūrtirmahākartā tatsyājjaṅgamalakṣaṇaṁ||
sarvasaṅgaparityāgī liṅgasaṅgī nirantaraṁ|
dvandvē tu samadr̥ṣṭis'syāt tatsyājjaṅgamalakṣaṇaṁ||
ghr̥ṇādr̥ṣṭirghr̥ṇāvākyaṁ ghr̥ṇāmūrtirnirantaraṁ|
kriyākarmasu vijñaśca śikṣācārya iti smr̥taḥ||
mūrtiśca liṅgamūrtiśca suśīlaṁ liṅgaśīlavat|
guṇaṁ sarvasya liṅgasya tatsyājjaṅgamalakṣaṇaṁ||
Endudāgi,
han'yātkrud'dhōpi cākāśaṁ kṣudhārtā khādayēttuṣaṁ|
tyaktvā liṅgārcanaṁ mūḍhō muktyarthī tritayaṁ vr̥thā||
śvapacōspi muniśrēṣṭhaḥ śivabhaktō dvijādhikaḥ|
śivabhaktivihīnastu dvijōspi śvapacādhamaḥ||
sa liṅgī sarvadaivajñō yas'sa cāṇḍālavadbhuvi|
liṅgārcakastu śvapacō dvijakōṭyā viśiṣyatē||
śivadharmē,
Upanītasahasrēbhyō brahmacārī viśiṣyatē|
brahmacārisahasrēbhyō vēdādhyāyī viśiṣyatē||
vēdādhyāyisahasrēbhyas'sāgnihotrī viśiṣyatē|
agnihōtrisahasrēbhyo yajñayājī viśiṣyatē||
yajñayājisahasrēbhyaḥ satrayājī viśiṣyatē|
satrayājisahasrēbhyaḥ sarvavidyārthapāragaḥ||
sarvavidyārthavitkōṭyā śivabhaktō viśiṣyatē|
endudāgi,
Nikr̥ṣṭācārajanmānō virud'dhālōkavr̥ttiṣu|
kōṭibhyō vēdaviduṣāṁ śrēṣṭhā madbhāvabhāvitāḥ||
endudāgi,
dēśāntara sanhiteyalli:
Krimikīṭapataṅgēbhyaḥ paśavaḥ prajñayādhikāḥ|
paśubhyōspi narāśrēṣṭhāstēṣu śrēṣṭhā dvijātayaḥ||
dvijātiṣvadhikā viprā viprēṣu kratubud'dhayaḥ|
kratubud'dhiṣu kartārastēbhyaḥ san'yāsinōdhikāḥ||
tēbhyō vijñāninaḥ śrēṣṭhāstēṣu śaṅkarapūjakāḥ|
Tēṣu śrēṣṭhā mahābhāgā mama liṅgāṅgasaṅginaḥ||
liṅgāṅgasaṅgiṣvadhikaḥ ṣaṭsthalajñānavānpumān|
tasmādapyadhikō nāsti triṣu lōkēṣu sarvadā||
endudāgi,
bhōgamūrtirmahāliṅgaṁ jaṅgamaśca na sanśayaḥ|
jaṅgamō liṅgarūpaṁ ca satyaṁ satyaṁ na sanśayaḥ||
sthāvaraṁ jaṅgamaścaiva dvividhaṁ liṅgamucyatē|
jaṅgamasyāvamānēna sthāvaraṁ niṣphalaṁ bhavēt||
ācāraśca gururliṅgaṁ jaṅgamaśca prasādakaḥ|
pan̄cavaktrasamāyuktaṁ mahāliṅgasya lakṣaṇaṁ||
jaṅgamō liṅgamācārō mahāliṅgaṁ gurustadā|
pan̄cavaktrasamāyuktaḥ prasādō liṅgalakṣaṇaṁ||
Ācārō guruliṅgaṁ ca mahāliṅgaprasādakaṁ|
pan̄cavaktrasamāyuktaṁ satyaṁ jaṅgamalakṣaṇaṁ||
prasādō jaṅgamaścaiva ācārō gurudēva ca|
mahāliṅgasamāyuktaṁ śivaliṅgasya lakṣaṇaṁ||
jñānācārō mahāliṅgaṁ śivaliṅgaṁ ca jaṅgamaḥ|
pan̄cavaktrasamāyuktaṁ ityētē gurulakṣaṇaṁ||
mahāliṅgaṁ prasādaśca jaṅgamō guruliṅgakaṁ|
pan̄cavaktrasamāyukta ācārō liṅgalakṣaṇaṁ||
aṅgamācāramāśritya ācāraḥ prāṇamāśritaḥ|
tatprāṇō śivaliṅga ca talliṅgaṁ jaṅgamāśritaṁ||
intendudāgi,
Kṣaṇadalli ari liṅgavanu,
kṣaṇārdhadalli liṅgavū ninnariva.
Kṣaṇārdhadalli ari bhaktakāyanendu.
Prāṇaliṅgavendaridu
liṅgavanu ondu kṣaṇadalli maredaḍe
kṣaṇārdhadalli maredaḍe, ninnanū ajñāniya māḍi
āyasaṁ baḍisi āsege oppisi ghāsimāḍade biḍanu liṅgavu.
Kṣaṇārdhadalli sarvaprapan̄cavellavanū maredu
nityavāgi liṅgavanari manave.
Nirantara liṅgadalliddu liṅgava hā[ḍe] sukhiyappe,
uriliṅgapeddipriya viśvēśvarane sākṣi.