Index   ವಚನ - 250    Search  
 
ಲಿಂಗವ ನಂಬಿ ಲಿಂಗಾರ್ಚನೆಯ ಮಾಡಿ ಲಿಂಗವಾದರು ಅಸಂಖ್ಯಾತಪುರಾತನರು. ಲಿಂಗವ ನಂಬದೆ ಅಂಗದಿಚ್ಛೆಯ ನಡೆದು ಭಂಗಿತರಾದರು ದೇವದಾನವಮಾನವರನೇಕರು, ಇದು ದೃಷ್ಟ. ಇಷ್ಟಾನಿಷ್ಟವಿದೆ: ಅನಿಷ್ಟವ ಬಿಟ್ಟು ಇಷ್ಟವ ಹಿಡಿದು ಬದುಕಿರಯ್ಯಾ ಕೆಡಬೇಡ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.