ಲಿಂಗಾರ್ಪಿತವ ಮಾಡಿ ಪ್ರಸಾದವನಲ್ಲದೆ ಭೋಗಿಸೆನೆಂಬ
ಪ್ರಸಾದಿಗಳಿಗೆ ಇನ್ನೆಂತಯ್ಯಾ?
ಅನರ್ಪಿತ ಭೋಗವು ಸಂಭವಿಸಿ ದೋಷವೇ ಪ್ರಾಪ್ತಿಯಾದ
ಪರಿಯ ನೋಡಾ.
ಅದೆಂತೋ ಅನರ್ಪಿತವ ಮನದಲ್ಲಿ ನೆನೆಯಬಹುದು?
ಅದೆಂತೋ ಅನರ್ಪಿತವ ಪಂಚೇಂದ್ರಿಯಗಳಲ್ಲಿ ಮುಟ್ಟಬಹುದು?
ಅಕಟಕಟಾ, ಅರ್ಪಿತವಿಲ್ಲದೆ ಸರ್ವವಸ್ತುವ ಅಂಗವಿಸಿ ಭೋಗಿಸಬಹುದೆ?
ಅಂಗ ಲಿಂಗವಾಗಿ ಲಿಂಗ ಪ್ರಾಣವಾಗಿ
ಪ್ರಾಣ ಮನವಾಗಿ ಮನವು ಲಿಂಗಸ್ವಾಯತವಾಗಿ
ಭಾವಶುದ್ಧವಾ[ಗೆ] ಮನವೇ ಲಿಂಗವು.
ಲಿಂಗ ಮುಂದು ಮನ ಹಿಂದಾಗಿ ಸರ್ವಕ್ರೀಯ ವರ್ತಿಸುವುದು,
ಈ ಕ್ರೀ ಸರ್ವಾರ್ಪಿತ.
ಇದು ತಾತ್ಪರ್ಯ ಕಳೆ, ಇದೇ ಅರ್ಪಿತಕ್ಕೆ ಜೀವ ಕಳೆ,
ಇಂತಹ ಮಹಿಮೆಗೆ ಸರ್ವಪ್ರಸಾದ, ಅದು:
ಪಂಚೇಂದ್ರಿಯವೆಲ್ಲವು ಲಿಂಗಾರ್ಪಿತ,
ಆತನ ಭೋಗವೆಲ್ಲವೂ ಪ್ರಸಾದಭೋಗ,
ಆತನು ಸದ್ಯೋನ್ಮುಕ್ತನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Liṅgārpitava māḍi prasādavanallade bhōgisenemba
prasādigaḷige innentayyā?
Anarpita bhōgavu sambhavisi dōṣavē prāptiyāda
pariya nōḍā.
Adentō anarpitava manadalli neneyabahudu?
Adentō anarpitava pan̄cēndriyagaḷalli muṭṭabahudu?
Akaṭakaṭā, arpitavillade sarvavastuva aṅgavisi bhōgisabahude?
Aṅga liṅgavāgi liṅga prāṇavāgi
prāṇa manavāgi manavu liṅgasvāyatavāgi
bhāvaśud'dhavā[ge] manavē liṅgavu.
Liṅga mundu mana hindāgi sarvakrīya vartisuvudu,
ī krī sarvārpita.
Idu tātparya kaḷe, idē arpitakke jīva kaḷe,
intaha mahimege sarvaprasāda, adu:
Pan̄cēndriyavellavu liṅgārpita,
ātana bhōgavellavū prasādabhōga,
ātanu sadyōnmuktanayyā,
uriliṅgapeddipriya viśvēśvarā.