Index   ವಚನ - 265    Search  
 
ವಟಬೀಜವು ವಟವೃಕ್ಷಕೋಟಿಯನೊಳಕೊಂಡಿಪ್ಪಂತೆ, ಸಟೆಯಿಂದಲಾದಜಾಂಡಕೋಟಿಯನೊಳಕೊಂಡಿಹ ಲಿಂಗವೆ, `ಅಯಂ ಮೇ ಹಸ್ತೋ ಭಗವಾನ್' ಎಂದೆನಿಸುವ ಲಿಂಗವೆ, `ಚಕಿತಮಭಿದತ್ತೇ ಶ್ರುತಿರಪಿ' ಎಂದೆನಿಸುವ ಲಿಂಗವೆ, ಎನ್ನ ಕರಸ್ಥಕ್ಕೆ ಬಂದು ಸೂಕ್ಷ್ಮವಾದೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.