ವಶಿಷ್ಠಗೋತ್ರದಲ್ಲಿ ಹುಟ್ಟಿದವನು ವಶಿಷ್ಠಗೋತ್ರದವನೆಂಬಂತೆ,
ಭಾರದ್ವಾಜಗೋತ್ರದಲ್ಲಿ ಹುಟ್ಟಿದವನು ಭಾರದ್ವಾಜಗೋತ್ರದವನೆಂಬಂತೆ,
ಕಾಶ್ಯಪಗೋತ್ರದಲ್ಲಿ ಹುಟ್ಟಿದವನು ಕಾಶ್ಯಪಗೋತ್ರದವನೆಂಬಂತೆ,
ವಿಶ್ವಾಮಿತ್ರಗೋತ್ರದಲ್ಲಿ ಹುಟ್ಟಿದವನು ವಿಶ್ವಾಮಿತ್ರಗೋತ್ರದವನೆಂಬಂತೆ
ಆ ಪರಿ ಆವಾವ ಗೋತ್ರದಲ್ಲಿ ಆವಾವ ಋಷಿಗಳ ವಂಶದಲ್ಲಿ ಜನಿಸಿದವನು
ಆ ಗೋತ್ರ, ಆ ಸಂತತಿ, ಆ ಸುತನು
ಎಂಬುದು ಉಪಚರ್ಯವೆ? ಅಸತ್ಯವೇ ಹೇಳಿರಣ್ಣಾ?
ಅದು ತಾತ್ಪರ್ಯ, ಅದು ಸತ್ಯ.
ಆ ಪರಿ ಬ್ರಾಹ್ಮಣನ ಮಗ ಬ್ರಾಹ್ಮಣನು, ಕ್ಷತ್ರಿಯನ ಮಗ ಕ್ಷತ್ರಿಯನು,
ವೈಶ್ಯನ ಮಗ ವೈಶ್ಯನು, ಶೂದ್ರನ ಶೂದ್ರನು, ಆ ಪರಿ ತಪ್ಪದು.
ದಿಟ ದಿಟ ವಿಚಾರಿಸಿ ನೋಡಿರೆ. ಅದು ಹೇಗೆಂದಡೆ ಶ್ರುತಿ:
`ಮಹಾಬ್ರಾಹ್ಮಣಮೀಶಾನಂ' ಎಂದುದಾಗಿ
ಮತ್ತಂ `ವಿರೂಪಾಕ್ಷಂ ದ್ವಿಜೋತ್ತಮಂ' ಎಂದುದಾಗಿ
ಮಹಾಬ್ರಾಹ್ಮಣನೇ ಮಹಾದೇವನು.
ಇದಕ್ಕೆ ಮತ್ತೆ ಶಿವರಹಸ್ಯದಲ್ಲಿ
ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ
ಗುರುದೇವಃ ಪರಂ ತತ್ತ್ವಂ ತಸ್ಮೈ ಶ್ರೀಗುರುವೇ ನಮಃ'
ಎಂದುದಾಗಿ,
ಮಹಾದೇವನೇ ಶ್ರೀಗುರು ಕಾಣಿರಣ್ಣಾ.
ಆ ಶ್ರೀಗುರುವಿನ ಕರಕಮಲದಲ್ಲಿ ಉದ್ಭವಿಸಿದ
ತಚ್ಛಿಷ್ಯನೇ ಮಹಾಬ್ರಾಹ್ಮಣನು, ಇಂತೆಂಬುದು ಹುಸಿಯಲ್ಲ.
ಜಾತಿ ಅಜಾತಿ ಎಂದು ಅಷ್ಟಾದಶಜಾತಿಯೊಳಗೆ ಇಕ್ಕಲಾಗದು.
ಅಷ್ಟಾದಶಜಾತಿಯೊಳಗೊಂದೂ ಭಾವಿಸಲಾಗದು.
ಆ ಮಹಿಮನೇ ಸತ್ಕುಲಜನು. ಇದಕ್ಕೆ ಮತ್ತುಂ
`ಬ್ರಹ್ಮಣಾ ಚರತೀತಿ ಬ್ರಾಹ್ಮಣಃ' ಎಂದುದಾಗಿ
ಆ ಮಹಾಮಹಿಮನು ಬ್ರಹ್ಮವ ಆಚರಿಸುವನಾಗಿ ಬ್ರಾಹ್ಮಣ.
ಮತ್ತಂ ಕೂರ್ಮಪುರಾಣದಲಿ
`ಸ ಏವ ಭಸ್ಮಜ್ಯೋತಿಃ' ಎಂದುದಾಗಿ
ವಿಭೂತಿಯ ಧರಿಸಿಪ್ಪವನಾಗಿ ಆ ಮಹಾತ್ಮನೇ ಜ್ಯೋತಿರ್ಲಿಂಗವು.
ಮತ್ತಂ ಶಿವಧರ್ಮದಲ್ಲಿ
`ರುದ್ರಾಕ್ಷಂ ಧಾರಯೇನ್ನಿತ್ಯಂ ರುದ್ರಸ್ಸಾಕ್ಷಾದಿವ ಸ್ಮೃತಃ' ಎಂದುದಾಗಿ
ರುದ್ರಾಕ್ಷಿಯಂ ಧರಿಸಿಪ್ಪವನಾಗಿ
ತಾನಾಗಿ ಆ ಮಹಾಮಹಿಮನೇ ರುದ್ರನು.
ಮತ್ತಂ ಕಾಳಿಕಾಗಮದಲ್ಲಿ
`ತಸ್ಮಿನ್ವೇದಾಶ್ಚ ಶಾಸ್ತ್ರಾಣಿ ಮಂತ್ರಃ ಪಂಚಾಕ್ಷರೀ ತಥಾʼ ಎಂದುದಾಗಿ,
ಶ್ರೀ ಪಂಚಾಕ್ಷರಿಯ ಜಪಿಸುವನಾಗಿ
ಆ ಮಹಿಮನೇ ವೇದವಿತ ಶಾಸ್ತ್ರಜ್ಞನು.
ಮತ್ತಂ ಲೈಂಗೇ
ಮೂಢನಾಮಪ್ಯಯುಕ್ತಾನಾಂ ಪಾಪಿನಾಂ ಚಾಭಿಚಾರಿಣಾಂ
ಯಮಲೋಕೋ ನ ವಿದ್ಯೇತ ಸದಾ ವೈ ಲಿಂಗಧಾರಣಾತ್
ಎಂದುದಾಗಿ
ಲಿಂಗವ ಧರಿಸಿಪ್ಪನಾಗಿ ಆ ಮಹಾಮಹಿಮನೇ ಲಿಂಗದೇಹಿ,
ಲಿಂಗಕಾಯನು, ಲಿಂಗಪ್ರಾಣನು
ಶಿವಲಿಂಗಾರ್ಚನೆಯಂ ಮಾಡುವನಾಗಿ, ಆ ಮಹಾಮಹಿಮನೇ ಶಿವನು
ಮತ್ತಂ ಆದಿತ್ಯಪುರಾಣೇ
ಅಕೃತ್ವಾ ಪೂಜನಂ ಶಂಭೋರ್ಯೋ ಭುಂಕ್ತೇ ಪಾಪಕೃದ್ದ್ವಿಜಃ
ಕುಣಪಂ ಚ ಮಲಂ ಚೈವ ಸಮಶ್ನಾತಿ ದಿನೇ ದಿನೇ
ಎಂದುದಾಗಿ
ಶಿವಲಿಂಗಕ್ಕೆ ಅರ್ಪಿಸದೇ ಕೊಳ್ಳನಾಗಿ ಆ ಮಹಾಮಹಿಮನೇ ರುದ್ರನು.
ಮತ್ತಂ ಶಾಂಕರಸಂಹಿತೆಯಲ್ಲಿ
ತಿಲಷೋಡಶಭಾಗಂ ತು ತೃಣಾಗ್ರಾಂಬುಕಣೋಪಮಂ
ಪಾದೋದಕಪ್ರಸಾದಾನಾಂ ಸೇವನಾನ್ ಮೋಕ್ಷಮಾಪ್ನುಯಾತ್
ಎಂದುದಾಗಿ
ಪಾದೋದಕ ಪ್ರಸಾದವಂ ಕೊಂಬನಾಗಿ
ಆ ಮಹಾತ್ಮರು ತಾನೇ ಲಿಂಗೈಕ್ಯನು.
ಇನ್ನು ನಾನಾವೇದಶಾಸ್ತ್ರಪುರಾಣಾಗಮಂಗಳ ಸಮ್ಮತ
ದೃಷ್ಟವಾಕ್ಯಂಗಳನು ವಿಚಾರಿಸಿ ನೋಡಿದಡೆಯೂ
ಶಿವಭಕ್ತನೇ ಕುಲಜನು, ಶಿವಭಕ್ತನೇ ಉತ್ತಮನು.
ಇಂತಹ ಶಿವಭಕ್ತನನು ಜಾತಿವಿಜಾತಿ ಎಂದು ಭಾವಿಸಿದಡೆ,
ಮರ್ತ್ಯನೆಂದು ಭಾವಿಸಿದಡೆ ನರಕ ತಪ್ಪದು.
ವಶಿಷ್ಠ ಪುರಾಣದಲ್ಲಿ ಕೇಳಿರೆ:
ಮರ್ತ್ಯವನ್ಮನುತೇ ಯಸ್ತು ಶಿವನಿಷ್ಠಂ ದ್ವಿಜಂ ನರಃ
ಕುಂಭೀಪಾಕೇ ತು ಪತತಿ ನರಕೇ ಕಾಲಮಕ್ಷಯಂ
ಎಂದುದಾಗಿ ಇದು ಕಾರಣ
ಅಷ್ಟಾದಶವಿದ್ಯಂಗಳನು ವಿಚಾರಿಸಿ ತಿಳಿದು ನೋಡಿದಡೆ
ಋಷಿಪುತ್ರನ ಋಷಿ ಎಂಬಂತೆ
ಶ್ರೀಗುರುಪುತ್ರನನು ಶ್ರೀಗುರು ಎಂಬುದಯ್ಯಾ.
ಆ ಮಹಾಮಹಿಮನ ದರ್ಶನವ ಮಾಡಿ ಪಾದೋದಕ ಪ್ರಸಾದವ
ಕೊಂಡು ಮುಕ್ತರಪ್ಪುದಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Vaśiṣṭhagōtradalli huṭṭidavanu vaśiṣṭhagōtradavanembante,
bhāradvājagōtradalli huṭṭidavanu bhāradvājagōtradavanembante,
kāśyapagōtradalli huṭṭidavanu kāśyapagōtradavanembante,
viśvāmitragōtradalli huṭṭidavanu viśvāmitragōtradavanembante
ā pari āvāva gōtradalli āvāva r̥ṣigaḷa vanśadalli janisidavanu
ā gōtra, ā santati, ā sutanu
embudu upacaryave? Asatyavē hēḷiraṇṇā?
Adu tātparya, adu satya.
Ā pari brāhmaṇana maga brāhmaṇanu, kṣatriyana maga kṣatriyanu,
vaiśyana maga vaiśyanu, śūdrana śūdranu, ā pari tappadu.
Diṭa diṭa vicārisi nōḍire. Adu hēgendaḍe śruti:
`Mahābrāhmaṇamīśānaṁ' endudāgi
mattaṁ `virūpākṣaṁ dvijōttamaṁ' endudāgi
mahābrāhmaṇanē mahādēvanu.
Idakke matte śivarahasyadalli
gurudēvō mahādēvō gurudēvas'sadāśivaḥ
gurudēvaḥ paraṁ tattvaṁ tasmai śrīguruvē namaḥ'
endudāgi,
mahādēvanē śrīguru kāṇiraṇṇā.
Ā śrīguruvina karakamaladalli udbhavisida
tacchiṣyanē mahābrāhmaṇanu, intembudu husiyalla.
Jāti ajāti endu aṣṭādaśajātiyoḷage ikkalāgadu.
Aṣṭādaśajātiyoḷagondū bhāvisalāgadu.
Ā mahimanē satkulajanu. Idakke mattuṁ
`brahmaṇā caratīti brāhmaṇaḥ' endudāgi
ā mahāmahimanu brahmava ācarisuvanāgi brāhmaṇa.
Mattaṁ kūrmapurāṇadali
`sa ēva bhasmajyōtiḥ' endudāgi
vibhūtiya dharisippavanāgi ā mahātmanē jyōtirliṅgavu.
Mattaṁ śivadharmadalli
`rudrākṣaṁ dhārayēnnityaṁ rudras'sākṣādiva smr̥taḥ' endudāgi
Rudrākṣiyaṁ dharisippavanāgi
tānāgi ā mahāmahimanē rudranu.
Mattaṁ kāḷikāgamadalli
`tasminvēdāśca śāstrāṇi mantraḥ pan̄cākṣarī tathāʼ endudāgi,
śrī pan̄cākṣariya japisuvanāgi
ā mahimanē vēdavita śāstrajñanu.
Mattaṁ laiṅgē
mūḍhanāmapyayuktānāṁ pāpināṁ cābhicāriṇāṁ
yamalōkō na vidyēta sadā vai liṅgadhāraṇāt
endudāgi
liṅgava dharisippanāgi ā mahāmahimanē liṅgadēhi,
liṅgakāyanu, liṅgaprāṇanu
Śivaliṅgārcaneyaṁ māḍuvanāgi, ā mahāmahimanē śivanu
mattaṁ ādityapurāṇē
akr̥tvā pūjanaṁ śambhōryō bhuṅktē pāpakr̥ddvijaḥ
kuṇapaṁ ca malaṁ caiva samaśnāti dinē dinē
endudāgi
śivaliṅgakke arpisadē koḷḷanāgi ā mahāmahimanē rudranu.
Mattaṁ śāṅkarasanhiteyalli
tilaṣōḍaśabhāgaṁ tu tr̥ṇāgrāmbukaṇōpamaṁ
pādōdakaprasādānāṁ sēvanān mōkṣamāpnuyāt
endudāgi
pādōdaka prasādavaṁ kombanāgi
ā mahātmaru tānē liṅgaikyanu.
Innu nānāvēdaśāstrapurāṇāgamaṅgaḷa sam'mata
dr̥ṣṭavākyaṅgaḷanu vicārisi nōḍidaḍeyū
śivabhaktanē kulajanu, śivabhaktanē uttamanu.
Intaha śivabhaktananu jātivijāti endu bhāvisidaḍe,
martyanendu bhāvisidaḍe naraka tappadu.
Vaśiṣṭha purāṇadalli kēḷire:
Martyavanmanutē yastu śivaniṣṭhaṁ dvijaṁ naraḥ
kumbhīpākē tu patati narakē kālamakṣayaṁ
endudāgi idu kāraṇa
aṣṭādaśavidyaṅgaḷanu vicārisi tiḷidu nōḍidaḍe
r̥ṣiputrana r̥ṣi embante
śrīguruputrananu śrīguru embudayyā.
Ā mahāmahimana darśanava māḍi pādōdaka prasādava
koṇḍu muktarappudayyā,
uriliṅgapeddipriya viśvēśvarā.