Index   ವಚನ - 274    Search  
 
ವೇದವಾಕ್ಯ ವಿಚಾರಕ್ಕೆ ಬೀಜ, ಶಾಸ್ತ್ರವಾಕ್ಯ ಸಂದೇಹಕ್ಕೆ ಬೀಜ, ಪುರಾಣವಾಕ್ಯ ಪುಣ್ಯಕ್ಕೆ ಬೀಜ, ಭಕ್ತಿಯ ಫಲ ಭವಕ್ಕೆ ಭೀಜ, ಏಕೋಭಾವನಿಷ್ಠೆ ಸಮ್ಯಕ್‍ಜ್ಞಾನಕ್ಕೆ ಬೀಜ, ಸಮ್ಯಕ್‍ಜ್ಞಾನ ಅದ್ವೈತಕ್ಕೆ ಬೀಜ, ಅದ್ವೈತ ಅರಿವಿಂಗೆ ಬೀಜ. ಅರಿವನಾರಡಿಗೊಂಡು ಕುರುಹಿಲ್ಲದ ಲಿಂಗದಲ್ಲಿ ತೆರಹಿಲ್ಲದಿಪ್ಪಂದವನರಿಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.