Index   ವಚನ - 282    Search  
 
ಶರಣರಲ್ಲದವರನಾಸೆಗೈದಡೆ ಕಕ್ಕುಲತೆಯಪ್ಪುದಲ್ಲದೆ ಕಾರ್ಯವಿಲ್ಲ, ಆಸೆಗೈದಡೆ ನಿರಾಸೆಯಪ್ಪುದು. ಶರಣರನಾಸೆಗೈದು ಬಂದ ಶಿವಶರಣಂಗೆ ಸತಿಯ ಕೊಟ್ಟರು ಸುತನ ಕೊಟ್ಟರು ಧನವ ಕೊಟ್ಟರು ಅಸುವ ಕೊಟ್ಟರು ಮನವ ಕೊಟ್ಟರು ಶರಣರ ಪರಿ ಆವ ಲೋಕದೊಳಗಿಲ್ಲ. ಶರಣಭರಿತಲಿಂಗವಾಗಿ ಬೇಡಿತ್ತ ಕೊಡುವರಯ್ಯಾ ಶರಣರು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.