ಶಿವಭಕ್ತನೆ ಕುಲಜ, ಅಧಮದೈವಕ್ಕೆರುಗುವನೆ ಅಕ್ಕುಲಜ.
ಪಟ್ಟಕ್ಕೆ ಯೋಗವಾದವನೆ ರಾಯ.
ರಣವಿಜಯನೆ ಕ್ಷತ್ರಿಯ, ವ್ಯವಹಾರಿಯೆ ವ್ಯಶ್ಯ.
ಆರಂಬರವ ಮಾಡುವವನೆ ಶೂದ್ರ,
ಶಿವಾಗಮದಲ್ಲಿಹಾತನೆ ಬ್ರಾಹ್ಮಣ, ಶಿವಭಕ್ತಹೀನನೆ ಶ್ವಪಚ.
ಸತ್ಕುಲಂ ದುಃಕುಲಂ ವಾಪಿ ಶಿವಭಕ್ತಿ ಸಮೇಳನಂ
ತಪಸಾ ಬ್ರಾಹ್ಮಣೋ ಭೋತ್ವ ತಸ್ಯ ಜಾತೀ ನಕಾರಯೇತ್'
ಎಂದುದಾಗಿ, ಆವ ಜಾತಿಯಾದಡು ಆಗಲಿ ಶಿವಭಕ್ತನೆ ಬ್ರಾಹ್ಮಣ.
ಅದೆಂತೆಂದೊಡೆ:
ಸಾಂಖ್ಯ ಶ್ವಪಚ, ವಾಲ್ಮೀಕಿ ಬೇಡ,
ವ್ಯಾಸ ಕಬ್ಬಲಿಗ, ಅಗಸ್ತ್ಯ, ಕುಂಭಜ,
ಕೌಂಡಿಲ್ಯ ನಾಯಿಂದ, ದಧೀಚಿ ಕಂಚಗಾರ,
ಕಾಶ್ಯಪ ಕಮ್ಮಾರ ದೂರ್ವಾಸ ಮುಚ್ಚಿಗ,
ವಶಿಷ್ಥೆ ವೇಶ್ಯಯ ಮಗ, ಗೌತಮ ಮೊಲದ ಮಗ.
ತೃಣಬಿಂದುಮುನಿ ತೃಣದ ಮಗ, ನಾರದ ಅಗಸ
ಮಾರ್ಕಂ ಡೇಯ ಹೊಲತಿಯ ಮಗ, ಮಾತಂಗ ಹೊಲೆಯ,
ಭಾರಧ್ವಾಜಮುನಿಜಗವರಿಯೆ ಮಾದಗಿತ್ತಿಯ ಮಗ,
ಇಂತೀ ಮಹಾಮುನಿಜನಂಗಳೆಲ್ಲ
ವಿಭೂತಿ ರುದ್ರಾಕ್ಷೀಯಂ ಧರಿಸಿ, ಪಂಚಾಕ್ಷರಿಯಂ ಜಪಿಸಿ,
ಶಿವಲಿಂಗಭಕ್ತರಾದ ಕಾಋಣ ಪೂರ್ವಗುಣವಳಿದು ಬ್ರಾಹ್ಮಣರಾದರು.
ಶಿವಭಕ್ತಿಯಿಲ್ಲದ ವಿಪ್ರ ಶ್ವಪಚಗಿಂದ ಅಧಮ,
ಅದೆಂತೆಂದೊಡೆ:
ನಳಚಕ್ರವರ್ತಿ ಹೋನ್ನ ಗೋದಾನವಂ ಕೋಡುವಲ್ಲಿ,
ವಿಪ್ರೆಲ್ಲಾ ಗೋವ ಕಡಿದು ವಿಭಾಗವ ಮಾಡಿಕೋಂಬುದ
ಶ್ವವಪಚರು ಕೇಳಿ ಓಡಿಬಂದು,
ಸತ್ತುದು ನಮಗೆ ಸಲ್ಲುವುದು, ಸಾಯದುದು ನಿಮಗೆ ಸಲುವುದು
ಎಂದು ನ್ಯಾಯವಿಚಾರದಲ್ಲಿ ಶ್ವಪಚರ ಕೊಂಡೊಯ್ಯುತ್ತಿರಲು.
ಮಾತಂಗಿಯ ಗರ್ಭಸಂಭವರೆಂಬ ಶ್ರುತಿ ಯ ವಿಪ್ರರು ತಿಳಿದು ನೋಡಿ
ಮಾತಂಗಿಯ ಮಕ್ಕ ಳು, ಶ್ವಪಚರು,
ರೇಣುಕಾದೇವಿಯ ಮಕ್ಕ ಳು, ವಿಪ್ರುರು.
ವಿಪ್ರುರು.ಶ್ವಪಚಚರು [ಜಮದಗ್ನಿಗೆ ಹುಟ್ಟಿದಕಾರಣ,
ತಮತಮಗೆ ದಾಯಾದ್ಯ ಭಾಗ-ಸಲ್ವದ
ಎಂದು ಕೋಡು ಕೊಳಗಬಾಲವ ವಿಭಾಗದ ಮಾಡಿಕೊಂಡ ಕಾರಣ
ಕರ್ಮಚಾಂಡಾಲರಾದರು.
ಜಾತಿಚಾಂಡಾಲಕಾನಂದಂ ದೋಷಂತತ್ರ ನವಿದ್ಯತೆ
ಕರ್ಮಚಾಂಡಾಲವಿಪ್ರ ಣಾಂ ನರಕೆ ಕಾಲಮಕ್ಷಯಂ
ಎಂದು ಸತ್ತ ಪಶುವ ತಿಂಬ ಹೊಲೆಯಂಗೆ.ದೋಷವಿಲ್ಲ.
ಗುದ್ದಿ ಗುದ್ದಿಬಾಧಿಸಿಹೋತ ಕೊಂದುತಿಂದು
ಸುರೆ ಯಂಕುಡಿದ ಶ್ವಪಚರಿಗಿಂದ ಅಧಮ ಪಾತಕರಾದ ವಿಪ್ರ,ರು
ಶಿವಭ ಕ್ತರ ಕುಲವ?ಜರೆಯುಲುಂಟೆ?
ರೋಮಜ ಮೊದಲಾದಮುನಿಜನಂಗಳು
ಹರಿ ಬ್ರಹ್ಮೇಂದ್ರೀಯ ದೇವಗಣಂಗಳು
ಶಿವಲಿಂಗ ಪ್ರಸಾದವ ಕೊಂಡು ಉತ್ತಮ ಪುರುಷ.ರಾದರು.
ಇವರೆಲ್ಲರಿಗೆಯೂ ಶಿವಭಕ್ತನೆ ಅಧಿಕವೆಂದು,
ಶಿವನು ಚೆನ್ನಯ್ಯನ ಪ್ರಸಾದವ ಕೊಂಡನಯ್ಯಾ.
ನಿಮ್ಮನರ್ಚಿಸಲು ಸಾವಿರ ಹಸ್ತವನುಳ್ಳ ಬಾಣಂಗೆ ತೀರದು,
ನಿಮ್ಮನರ್ಚಿಸಲು ಸಾವಿರ ನೇತ್ರವುಳ್ಳ ಶಕ್ತಿಗೆ ನಿರೀಕ್ಷಿಸಬಾರದು.
ನಿಮ್ಮಂಘ್ರಿಯ ಕೀರ್ತಿಯ ಸಾವಿರ ಜಿಹ್ವೆಯುಳ್ಳ ಫಣಿ ಕೀರ್ತಿಸಲಾರಂ
ಮಹಾಘನವೆಂತೋ ಉರಿಲಿಂಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Śivabhaktane kulaja, adhamadaivakkeruguvane akkulaja.
Paṭṭakke yōgavādavane rāya.
Raṇavijayane kṣatriya, vyavahāriye vyaśya.
Ārambarava māḍuvavane śūdra,
śivāgamadallihātane brāhmaṇa, śivabhaktahīnane śvapaca.
Satkulaṁ duḥkulaṁ vāpi śivabhakti samēḷanaṁ
tapasā brāhmaṇō bhōtva tasya jātī nakārayēt'
endudāgi, āva jātiyādaḍu āgali śivabhaktane brāhmaṇa.
Adentendoḍe:
Sāṅkhya śvapaca, vālmīki bēḍa,
vyāsa kabbaliga, agastya, kumbhaja,
kauṇḍilya nāyinda, dadhīci kan̄cagāra,
kāśyapa kam'māra dūrvāsa mucciga,
vaśiṣthe vēśyaya maga, gautama molada maga.
Tr̥ṇabindumuni tr̥ṇada maga, nārada agasa
mārkaṁ ḍēya holatiya maga, mātaṅga holeya,
bhāradhvājamunijagavariye mādagittiya maga,
intī mahāmunijanaṅgaḷella
vibhūti rudrākṣīyaṁ dharisi, pan̄cākṣariyaṁ japisi,
śivaliṅgabhaktarāda kā'r̥ṇa pūrvaguṇavaḷidu brāhmaṇarādaru.
Śivabhaktiyillada vipra śvapacaginda adhama,
Adentendoḍe:
Naḷacakravarti hōnna gōdānavaṁ kōḍuvalli,
viprellā gōva kaḍidu vibhāgava māḍikōmbuda
śvavapacaru kēḷi ōḍibandu,
sattudu namage salluvudu, sāyadudu nimage saluvudu
endu n'yāyavicāradalli śvapacara koṇḍoyyuttiralu.
Mātaṅgiya garbhasambhavaremba śruti ya vipraru tiḷidu nōḍi
mātaṅgiya makka ḷu, śvapacaru,
rēṇukādēviya makka ḷu, vipruru.
Vipruru.Śvapacacaru [jamadagnige huṭṭidakāraṇa,
tamatamage dāyādya bhāga-salvada
Endu kōḍu koḷagabālava vibhāgada māḍikoṇḍa kāraṇa
karmacāṇḍālarādaru.
Jāticāṇḍālakānandaṁ dōṣantatra navidyate
karmacāṇḍālavipra ṇāṁ narake kālamakṣayaṁ
endu satta paśuva timba holeyaṅge.Dōṣavilla.
Guddi guddibādhisihōta kondutindu
sure yaṅkuḍida śvapacariginda adhama pātakarāda vipra,ru
śivabha ktara kulava?Jareyuluṇṭe?
Rōmaja modalādamunijanaṅgaḷu
hari brahmēndrīya dēvagaṇaṅgaḷu
śivaliṅga prasādava koṇḍu uttama puruṣa.Rādaru.
Ivarellarigeyū śivabhaktane adhikavendu,
Śivanu cennayyana prasādava koṇḍanayyā.
Nim'manarcisalu sāvira hastavanuḷḷa bāṇaṅge tīradu,
nim'manarcisalu sāvira nētravuḷḷa śaktige nirīkṣisabāradu.
Nim'maṅghriya kīrtiya sāvira jihveyuḷḷa phaṇi kīrtisalāraṁ
mahāghanaventō urilimpeddipriya viśvēśvarā.