Index   ವಚನ - 297    Search  
 
ಶಿವಶರಣರಿಗೆ ಶರಣೆನ್ನದೆ ಅಹಂಕಾರದಿಂದ ನಾರಸಿಂಹ ಶಿರವ ಹೋಗಾಡಿಕೊಂಡ. ಶಿವಶರಣರಿಗೆ ಶರಣೆನ್ನದೆ ಅಹಂಕಾರದಿಂದ ದಕ್ಷ ಶಿರವ ಹೋಗಾಡಿಕೊಂಡ. ಶಿವಶರಣರಿಗೆ ಶರಣೆನ್ನದೆ ಅಹಂಕರಿಸಿ ಇಂದ್ರ ಮಹದೈಶ್ವರ್ಯವ ಹೋಗಾಡಿಕೊಂಡ. ಇವರುಗಳು ಶಿವಶರಣರಿಗೆ ಶರಣೆನ್ನದೆ ಅಹಂಕರಿಸಿ ಅನೇಕ ಪರಿಯಲ್ಲಿ ಭಂಗಿತರಾದರು. ಅರಿದು ಅಹಂಕಾರವಡಗಿ ಶರಣರಿಗೆ ಶರಣೆಂದು ಮರಳಿ ನಿಜಪದಂಗಳ ಪಡೆದು ಭಕ್ತರಾದರು. ಇದನರಿದು ಅಹಂಕರಿಸಿ ಕೆಡದೆ, ಶಿವಶರಣರಿಗೆ ಶರಣೆಂದು ಭಕ್ತಿಯನೂ ಮಹಾಪದವನೂ ಮುಕ್ತಿಯನೂ ಹಡೆವುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.