Index   ವಚನ - 302    Search  
 
ಶಿವ ಶಿವಾ, ನೀನೆನ್ನ ಮನವ ನೋಡಿಹೆನೆಂಬೆ. ಎನ್ನ ಗುಣಾವಗುಣವ ಹಿಡಿವೆ. ಮನವಾರು? ನೀನಾರು? ಎಂಬುದನರಿಯಾ. ನೀನರಿಯದಿದ್ದಡೆ ನಾನರಿಯೆನೆ? ನಾನರಿಯದಿದ್ದಡೆ ನೀನರಿಯಾ? ಎಂದೆನಗೆ ನೀನು ಪ್ರಾಣಲಿಂಗವಾದೆ, ಅಂದೇ ಲಿಂಗಪ್ರಾಣಿಯಾದೆನು ನಾನು. ಇನ್ನು ಮನಸಿನ್ನಾರದು ಹೇಳಾ? ಅದು ಕಾರಣ ದ್ವಂದ್ವಕರ್ಮ ಮುನ್ನವೇ ನಾಸ್ತಿ. ಇದನು ಶ್ರೀಗುರು ಲಿಂಗ ಜಂಗಮದ ಪ್ರಸಾದವೆಂದ ಶಾಸ್ತ್ರಪುರಾಣಾಗಮಂಗಳು ಈಸಬಲ್ಲುದ ನಾ ತೋರಲೇಕಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ?