Index   ವಚನ - 306    Search  
 
ಶಿಷ್ಯನ ಗುರುತ್ವವನು, ಗುರುವಿನ ಮಹತ್ವವನು, ಗುರು ಶಿಷ್ಯನಾದ ಪರಿಯನು, ಶಿಷ್ಯ ಗುರುವಾದ ಪರಿಯನು, ಆರಯ್ಯ ಬಲ್ಲವರು? ವಾಙ್ಮನೋತೀತ ಉಪಮಿಸಬಾರದು ಮಹಾಕ್ರೀಯನು. ಭಕ್ತಿಯಿಂದ ಗುರುಭಕ್ತಿವತ್ಸಲನಾಗಿ ಶಿಷ್ಯನಾದ ಪರಿ ಬೀಜವೃಕ್ಷನ್ಯಾಯದಂತೆ ಅವಿನಾಭಾವವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.