ಶ್ರೀಗುರು ಕರುಣಿಸಿ ಪ್ರಾಣಲಿಂಗಸಂಬಂಧವ ಮಾ[ಡೆ],
ಸದ್ಭಕ್ತನೆನಿಸಿದ ಬಳಿಕ ಇನ್ನೇನೆಂದುಪಮಿಸಬಹುದಯ್ಯಾ,
ಈ ಮಹಾಪಥವನು?
`ಅಕಾಯೋ ಭಕ್ತಕಾಯಸ್ತು ಮಮಕಾಯಸ್ತು ಭಕ್ತಿಮಾನ್ '
ಎಂದುದಾಗಿ ಲಿಂಗಕಾಯ. `ಲಿಂಗಾಂಗೀ ಮಹಜ್ಜೀವೋ '
ಎಂದುದಾಗಿ ಲಿಂಗಪ್ರಾಣಿ.
ಇದು ಕಾರಣ,
ಕಾಯ ಲಿಂಗ, ಪ್ರಾಣ ಲಿಂಗ ಅಂತರಂಗ ಬಹಿರಂಗ ಸರ್ವಾಂಗಲಿಂಗ,
ಲಿಂಗವಂತನ ಕ್ರೀ ಎಲ್ಲವೂ ಲಿಂಗಕ್ರೀ. ಲಿಂಗ ಮಾಡಿತ್ತೇ ಅರ್ಪಿತ,
ಲಿಂಗವಂತನ ಆರೋಗಣೆ ಲಿಂಗದಾರೋಗಣೆ.
ಈ ಮಹಾಜ್ಞಾನದ ಪರಿಣಾಮವೇ ಪ್ರಸಾದ,
ಇದ್ದುದೇ ದೇವಲೋಕ.
ಈ ಮಹಾಕ್ರೀಯ ಲಿಂಗಾಯತದ ಲಿಂಗವಂತರೆ ಬಲ್ಲರು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Śrīguru karuṇisi prāṇaliṅgasambandhava mā[ḍe],
sadbhaktanenisida baḷika innēnendupamisabahudayyā,
ī mahāpathavanu?
`Akāyō bhaktakāyastu mamakāyastu bhaktimān'
endudāgi liṅgakāya. `Liṅgāṅgī mahajjīvō'
endudāgi liṅgaprāṇi.
Idu kāraṇa,
kāya liṅga, prāṇa liṅga antaraṅga bahiraṅga sarvāṅgaliṅga,
liṅgavantana krī ellavū liṅgakrī. Liṅga māḍittē arpita,
liṅgavantana ārōgaṇe liṅgadārōgaṇe.
Ī mahājñānada pariṇāmavē prasāda,
iddudē dēvalōka.
Ī mahākrīya liṅgāyatada liṅgavantare ballaru
uriliṅgapeddipriya viśvēśvarā.