Index   ವಚನ - 308    Search  
 
ಶ್ರೀಗಂಧದ ತರು ಕಾಮರನಾದುದುಂಟೆ? ಹೇಮದ ಪರ್ವತ ಹುಲುಮೊರಡಿಯಾದುದುಂಟೆ? ಮಹಾಸಿಂಹ ಹುಲುಮೃಗವಾದುದುಂಟೆ? ಜ್ಞಾನಿ ಅಜ್ಞಾನಿಯಾದುದುಂಟೆ? ವಿರಕ್ತ ಸಂಸಾರಿಯಾದುದುಂಟೆ? ಲಿಂಗವೆ ತಾನೆಂದರಿದ ಶರಣಂಗೆ ಬೇರೆ ಅಂಗೇಂದ್ರಿಯಂಗಳ ವಿಕಾರವೆಂಬುದುಂಟೆ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.