Index   ವಚನ - 322    Search  
 
ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣ, ಶಬ್ದ ಸ್ಪರ್ಶ ರೂಪು ರಸ ಗಂಧ, ಆಕಾಶ, ವಾಯು, ಅಗ್ನಿ, ಸಲಿಲ, ಭೂಮಿ. ಈ ಸಕಲ ಕಾರಣ ಪ್ರಾಪ್ಯಸ್ವರೂಪನಾಗಿ, ``ಸಾಮವೇದಾಶ್ರಯೋ ಪುರುಷಃ ``ಸ್ವಯಂಜ್ಯೋತಿರಸ್ಮಿನ್ ಮಾನುಷತ್ವಂ ಉಪೇತ್ಯ ಎಂಬ ಶ್ರುತಿಗೆ ಅಪ್ರತಿಮೇಯನಾಗಿ ವಿೂರಿದ, ನಿತ್ಯ ಶುದ್ಧ ಪ್ರಬುದ್ಧ ಬೋಧ ವೇದ್ಯ ಸಂವಿದ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.