Index   ವಚನ - 352    Search  
 
ಸ್ಥೂಲತನು ಸೂಕ್ಷ್ಮತನುವಿಡಿದು ಜಾಗ್ರತೆಯಲ್ಲಿ ಶ್ರೀಗುರುಲಿಂಗಜಂಗಮದಾಸೋಹವ ಮಾಡದೆ ಮಾತಿನಬ್ರಹ್ಮ ಲಿಂಗವಂತರಿಗೆ ತರ್ಕವೇತಕಯ್ಯಾ? ಸೂಕ್ಷ್ಮತನುವಿಡಿದು ಸ್ವಪ್ನದಲ್ಲಿ ಇಷ್ಟಲಿಂಗದಲ್ಲಿ ಪ್ರಾಣವೆಚ್ಚರಿಕೆಯಲ್ಲಿ ಅರಿವೇ ಲಿಂಗವಲ್ಲದೆ ಬ್ರಹ್ಮವಾವುದಯ್ಯಾ? ಕಾರಣತನುವಿಡಿದು ಸುಷುಪ್ತಿಯಲ್ಲಿ ತೃಪ್ತಿಲಿಂಗದಲ್ಲಿ ಪ್ರಾಣಲೀಯವಾಗಿ ಕುರುಹನರಿವನುಳಿದ ಸುಖದರಿವಿನ ಲಿಂಗವನರಿದ ಬಳಿಕ ನಿರಾಕಾರಬ್ರಹ್ಮವೆಂಬ ನುಡಿಯದೇಕೆ? ಲಿಂಗಬ್ರಹ್ಮವಾಗಿಪ್ಪರು ನಮ್ಮ ಶರಣರು. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.