ಆವಂಗದ ಮರೆಯಲ್ಲಿದ್ದು ಕಾದುವ ಭಟನು;
ಆ(ವಂಗ)ದ ಮರೆಯ ಸತ್ವವೋ?
ತನ್ನ ಹೃದಯದ ಸತ್ವವೋ?
ಒಂದನಹುದು ಒಂದನಲ್ಲಾ,
ಎಂದಡೆ ಕ್ರೀ ನಿಃಕ್ರೀಯೆಂಬ ಉಭಯವಿಲ್ಲ.
ಎರಡನೊಡಗೂಡಿ ಒಂದನರಿದಿಹೆನೆಂದಡೆ
ಸಾಕಾರವೊಂದು, ನಿರಾಕಾರವೊಂದು.
ಸಾಕಾರವನು ನಿರಾಕಾರವನು ಏಕೀಕರಿಸಿ ಕಂಡೆಹೆನೆಂದಡೆ
ಅದು ಒಂದು ದೃಷ್ಟ, ಒಂದು ತನ್ನಷ್ಟ.
ಆ ಉಭಯದಂಗ ಒಂದಂಗವಾಗಿ
ಕರ್ಪುರದ ಗಿರಿಯಲ್ಲಿ ಉರಿಯುದಿಸಿದ ತೆರನಂತೆ
ಉಭಯ ಏಕವಾಗಿಯಲ್ಲದೆ
ಭೋಗಬಂಕೇಶ್ವರಲಿಂಗವನರಿಯಬಾರದು.
Art
Manuscript
Music
Courtesy:
Transliteration
Āvaṅgada mareyalliddu kāduva bhaṭanu;
ā(vaṅga)da mareya satvavō?
Tanna hr̥dayada satvavō?
Ondanahudu ondanallā,
endaḍe krī niḥkrīyemba ubhayavilla.
Eraḍanoḍagūḍi ondanaridihenendaḍe
sākāravondu, nirākāravondu.
Sākāravanu nirākāravanu ēkīkarisi kaṇḍ'̔ehenendaḍe
adu ondu dr̥ṣṭa, ondu tannaṣṭa.
Ā ubhayadaṅga ondaṅgavāgi
karpurada giriyalli uriyudisida teranante
ubhaya ēkavāgiyallade
bhōgabaṅkēśvaraliṅgavanariyabāradu.