Index   ವಚನ - 5    Search  
 
ಪೂರ್ವ ಆದಿಯಂತ ಸಿದ್ಧಾಂತವಾದ ತೆರ: ಆವ ಬೀಜವೂ ಅಪ್ಪುಸಾರವಿಲ್ಲದೆ ಪ್ರತ್ಯಕ್ಷ ದೃಷ್ಟವುಂಟೆ? ಸರ್ವಕ್ರೀಗಳೆಲ್ಲವೂ ಜ್ಞಾನವಿಲ್ಲದಿರೆ ಕ್ರೀದೃಷ್ಟಸತ್ಯವಪ್ಪವೆ? ಇಂತೀ ಜ್ಞಾನಸರ್ವಗುಣನಾಗಿ ಸತ್ಕ್ರೀಮಾರ್ಗಗಳಿಂದ ಒಪ್ಪಲ್ಪಟ್ಟುದು ಲಿಂಗದ ಅಂಗದ ಸೋಂಕಿನ ಸಂಗ, ಈ ಗುಣವು ಭೋಗಬಂಕೇಶ್ವರಲಿಂಗದೊಲವು.