Index   ವಚನ - 2    Search  
 
ಆದಿ ಅನಾದಿಯಿಲ್ಲದಂದು ; ಶೂನ್ಯ ನಿಃಶೂನ್ಯವಿಲ್ಲದಂದು; ಸುರಾಳ ನಿರಾಳವಿಲ್ಲದಂದು ; ಭೇದಾಭೇದಂಗಳೇನೂ ಇಲ್ಲದಂದು ; ನಿಮ್ಮ ನೀವರಿಯದೇ ಇರ್ದಿರಲ್ಲ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.