ಪರಶಿವತತ್ವದ ಸ್ವರೂಪವ ಬಲ್ಲೆವೆಂಬಿರಿ,
ನಿಮ್ಮ ಬಲ್ಲತನವ ಪೇಳಿರಯ್ಯಾ.
ಆಗಮ ಪುರುಷರಿರಾ, ನಿಮ್ಮಾಗಮಂಗಳು ನಮ್ಮ ಶಿವನ ನಿಲುಕಡೆಯನರಿಯದೆ,
ಅರಸಿ ಅರಸಿ ಆಸತ್ತು ಬಳಲಿ ಹೋದವು ಕೇಳಿರಯ್ಯಾ.
ವೇದಪುರುಷರಿರಾ, ನಿಮ್ಮ ವೇದಂಗಳು ವೇದಿಸಲರಿಯದೆ
ನಾಯಾಗಿ ಬೊಗಳಿ, ಬೆಂಡಾಗಿ ಹೋದವು ಕೇಳಿರಯ್ಯಾ.
ಪುರಾಣಪುರುಷರಿರಾ, ನಿಮ್ಮ ಪುರಾಣಂಗಳು ಪೂರೈಸಿ
ಪರಶಿವನ ಕಾಣದೆ ವೀರಶೈವ ಪುಂಡ್ರಮಸ್ತಕದಿಂದ
ಮಥನಿಸಿ ಹೋದವು ಕೇಳಿರಯ್ಯಾ.
ಶಾಸ್ತ್ರಸಂಬಂಧಿಗಳರಿರಾ ನಿಮ್ಮಶಾಸ್ತ್ರ ಸಾಧಿಸಿ
ನಮ್ಮ ಪರಶಿವನ ನಿಲುಕಡೆಯಕಾಣದೆ
ಒರಲಿ ಒರಲಿ ಹೋದವು ಕೇಳಿರಯ್ಯಾ.
ತರ್ಕ ತಂತ್ರಗಳ ಕಲಿತು ಹೇಳುವರೆಲ್ಲ
ಟಗರು, ಕೋಣ, ಹುಂಜಿನಂತೆ
ಹೋರಾಡಿ ಮಥನದಿಂದ ಹೊಡೆದಾಡಿ
ಪರಶಿವನ ಕಾಣದೆ ಸತ್ತು ಹೋದರಲ್ಲಾ !
ಇಂತೀ ವೇದ ಶಾಸ್ತ್ರಾಗಮ ಪುರಾಣ ತರ್ಕ ತಂತ್ರಗಳು
ಶಿವನ ನಿಲುಕಡೆಯನೆಂದಿಗೂ ಅರಿಯವು.
ಇಂತಿವನೆಲ್ಲವನು ನೋಡಿ ಶಿವನ ಕೂಡಬೇಕೆಂಬಣ್ಣಗಳು
ಮುನ್ನವೆ ಅರಿಯರು, ಅದೇನು ಕಾರಣವೆಂದಡೆ-
ಪ್ರಸೂತವಾಗದ ಮುನ್ನ ಶಿಶು ಬಯಸಿದರುಂಟೆ ?
ಹಸಿಯಿಲ್ಲದ ಭೂಮಿಯಲ್ಲಿ ಬೀಜವ ಬಿತ್ತಿ
ಫಲವ ಬಯಸಿದರುಂಟೆ ?
ಈ ದೃಷ್ಟಾಂತದಂತೆ ತಿಳಿದು
ಇಂತೀ ಎಲ್ಲವನು ವಿಸರ್ಜಿಸಿ ಕಳೆವುದು ಶಿವಜ್ಞಾನ.
ಅಂತಪ್ಪ ಶಿವಜ್ಞಾನದ ನಿಲವು ಕರಸ್ಥಳದ ಇಷ್ಟಲಿಂಗ.
ಆ ಇಷ್ಟಲಿಂಗಬ್ರಹ್ಮದ ನಿಜವು ತಾನೆಂದು ತಿಳಿದು
ಶಿಶುಕಂಡ ಕನಸಿನಂತೆ, ಮೂಕ ಸಕ್ಕರಿಯ ಮೆದ್ದಂತೆ ಇರ್ದರಯ್ಯಾ
ನಿಮ್ಮ ಶರಣರು ಎಂದನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ
ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
Art
Manuscript
Music
Courtesy:
Transliteration
Paraśivatatvada svarūpava ballevembiri,
nim'ma ballatanava pēḷirayyā.
Āgama puruṣarirā, nim'māgamaṅgaḷu nam'ma śivana nilukaḍeyanariyade,
arasi arasi āsattu baḷali hōdavu kēḷirayyā.
Vēdapuruṣarirā, nim'ma vēdaṅgaḷu vēdisalariyade
nāyāgi bogaḷi, beṇḍāgi hōdavu kēḷirayyā.
Purāṇapuruṣarirā, nim'ma purāṇaṅgaḷu pūraisi
paraśivana kāṇade vīraśaiva puṇḍramastakadinda
mathanisi hōdavu kēḷirayyā.Śāstrasambandhigaḷarirā nim'maśāstra sādhisi
nam'ma paraśivana nilukaḍeyakāṇade
orali orali hōdavu kēḷirayyā.
Tarka tantragaḷa kalitu hēḷuvarella
ṭagaru, kōṇa, hun̄jinante
hōrāḍi mathanadinda hoḍedāḍi
paraśivana kāṇade sattu hōdarallā!
Intī vēda śāstrāgama purāṇa tarka tantragaḷu
śivana nilukaḍeyanendigū ariyavu.Intivanellavanu nōḍi śivana kūḍabēkembaṇṇagaḷu
munnave ariyaru, adēnu kāraṇavendaḍe-
prasūtavāgada munna śiśu bayasidaruṇṭe?
Hasiyillada bhūmiyalli bījava bitti
phalava bayasidaruṇṭe?
Ī dr̥ṣṭāntadante tiḷidu
intī ellavanu visarjisi kaḷevudu śivajñāna.Antappa śivajñānada nilavu karasthaḷada iṣṭaliṅga.
Ā iṣṭaliṅgabrahmada nijavu tānendu tiḷidu
śiśukaṇḍa kanasinante, mūka sakkariya meddante irdarayyā
nim'ma śaraṇaru endanayyā nim'ma śaraṇa
kāḍanoḷagāda śaṅkarapriya
cannakadambaliṅga nirmāyaprabhuve.