Index   ವಚನ - 51    Search  
 
ನೀರಿಲ್ಲದ ಮರದ ಬೇರ ತಂದು, ಏಳು ಗುಳಿಗೆಯ ಮಾಡಿ ಎನ್ನ ಕೈಯೊಳಗೆ ಕೊಟ್ಟನು ಗೊಲ್ಲನು. ಆ ಏಳು ಗುಳಿಗೆಯನು- ಒಂದು ಬ್ರಹ್ಮಂಗೆ ಕೊಟ್ಟೆ, ಒಂದು ವಿಷ್ಣುವಿಂಗೆ ಕೊಟ್ಟೆ, ಒಂದು ಈಶ್ವರಂಗೆ ಕೊಟ್ಟೆ, ಒಂದು ಸದಾಶಿವಂಗೆ ಕೊಟ್ಟೆ, ಒಂದು ರುದ್ರಂಗೆ ಕೊಟ್ಟೆ, ಒಂದು ಪರಮೇಶ್ವರಂಗೆ ಕೊಟ್ಟೆ, ಒಂದು ನಾ ನುಂಗಿ ಸತ್ತು ಬದುಕಿ ಕಾಯಕವ ಮಾಡುತ್ತಿರ್ದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.