Index   ವಚನ - 53    Search  
 
ಎನ್ನ ಮನದಲ್ಲಿ ನೀ ಹುಟ್ಟಿ, ನಿನ್ನ ಕರದಲ್ಲಿ ನಾ ಹುಟ್ಟಿ, ಉಭಯರು ಕೂಡಲಿಕ್ಕೆ ಎನಗೊಂದು, ನಿನಗೆ ಮೂರು ಮಕ್ಕಳು ಹುಟ್ಟಿ, ನಾ ಬರುವಾಗ ನಿನ್ನ ಮಕ್ಕಳ ಮೂವರನು ಒಬ್ಬನ ಮರ್ತ್ಯಲೋಕದಲ್ಲಿಟ್ಟೆ, ಒಬ್ಬನ ಪಾತಾಳಲೋಕದಲ್ಲಿಟ್ಟೆ, ಒಬ್ಬನ ಸ್ವರ್ಗಲೋಕದಲ್ಲಿಟ್ಟೆ. ಇಂತೀ ಮೂವರನು ಮೂರುಲೋಕದಲ್ಲಿಟ್ಟು ನಾ ನನ್ನ ಮಗನ ಸಂಗವ ಮಾಡಿ, ಸತ್ತು ಮುತ್ತೈದೆಯಾಗಿರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.