Index   ವಚನ - 58    Search  
 
ಇಂತಪ್ಪ ಲಿಂಗಧಾರಣದ ಭೇದವ ತಿಳಿಯದೆ ಕಲ್ಲ ಲಿಂಗಕ್ಕೆ ಕಾಡಹೂವ ತಂದು, ಹೊಳೆ-ಬಾವಿ-ಹಳ್ಳ-ಕೊಳ್ಳ-ಕೆರೆಯ ನೀರು ತಂದು ಮಜ್ಜನಕ್ಕೆರೆದು, ದೀಪ ಧೂಪ ಪತ್ರಿ ಪುಷ್ಪದಿಂದ ಶಿವನೆಂದು ಭಾವಿಸಿ ಪೂಜೋಪಚಾರವ ಮಾಡಿ, ವರವ ಬೇಡಿದರೆ ಬೇಡಿದ ಫಲವ ಕೊಟ್ಟು ಗಾಡಿಕಾರನಂತೆ ಅವರ ಕಣ್ಣಿಗೆ ಮಂಜುಗವಿಸಿ ಕಡೆಗಾಗಿರ್ಪ ನಮ್ಮ ಶಿವನು. ಇಂತಪ್ಪ ಮೂಢಾತ್ಮರು, ಅಂತಪ್ಪ ಜಡಪಾಷಾಣಲಿಂಗವ ಅನಂತಕಾಲ ಧರಿಸಿ, ಪೂಜೋಪಚಾರವ ಮಾಡಿದಡೆಯೂ ವ್ಯರ್ಥವಲ್ಲದೆ ಸಾರ್ಥಕವಲ್ಲ. ಮುಂದೆ ಭವರಾಟಾಳದಲ್ಲಿ ಬಪ್ಪುದು ತಪ್ಪದು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.