Index   ವಚನ - 62    Search  
 
ಇಂತಪ್ಪ ಲಿಂಗಧಾರಣದ ನಿರ್ಣಯವನು ಸ್ವಾನುಭಾವಮೂರ್ತಿಗಳಿಂದ ವಿಚಾರಿಸಿಕೊಂಡು ಅಂಗದ ಮೇಲೆ ಲಿಂಗಧಾರಣವಾಗಿ ಪ್ರಪಂಚಮಾಡಿದಡೆಯೂ ಪ್ರಪಂಚಕನಲ್ಲ. ಅದೇನು ಕಾರಣವೆಂದಡೆ- ತಾವರೆಪರ್ಣ ಉದಕದಲ್ಲಿ ಪುಟ್ಟಿ ಆ ಉದಕಕ್ಕೆ ಹೊಂದದೆ ಇರ್ಪಂತೆ- ಲೋಕದ ಕಾಕುಜನರ ಮಧ್ಯದಲ್ಲಿ ಶಿವಶರಣನುದ್ಭವಿಸಿದಡೆಯೂ ಆ ಲೋಕಕ್ಕೆ ಸಮವಿಲ್ಲೆಂಬ ಹಾಗೆ. ಚಿದಂಶಿಕನಾದ ಜ್ಞಾನಕಲಾತ್ಮನು ಸುಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಪಡೆದು ಲಿಂಗಾಂಗಸಂಬಂಧಿಗಳಾಗಿ ಇಷ್ಟ ವ್ಯವಹಾರವನಾಚರಿಸಿದಡೆ ಲಿಂಗಮುಖದಿಂದಾಚರಿಸುವರು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.