Index   ವಚನ - 63    Search  
 
ಪಂಚವರ್ಣದ ಗೋವಿನ ಶೆಗಣೆಯ ಬೆಂಕಿಲ್ಲದೆ ಸುಟ್ಟು, ನೀರಿಲ್ಲದೆ ನೀರಲ್ಲಿ ಕಲಸಿ ಉಂಡಿಗಟ್ಟಿ, ಕೈಯಲ್ಲಿ ಪಿಡಿದು ಸರ್ವಾಂಗದಲ್ಲಿ ಧರಿಸಿ ಕಾಯಕವ ಮಾಡುತಿರ್ದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.