Index   ವಚನ - 64    Search  
 
ಇಂತೀ ನಿರ್ಣಯದಲ್ಲಿ ವಿಭೂತಿ ಧರಿಸಲರಿಯದೆ ಕುಳ್ಳು ಕಟ್ಟಿಗೆಯ ಸುಟ್ಟು ಬೂದಿಯ ತಂದು, ನೀರಲ್ಲಿ ಕಲಿಸಿದ ಉಂಡಿ ತಂದು, ಜಂಗಮದ ಪಾದೋದಕದಿಂ ಶುದ್ಧಮಾಡಿ ಧರಿಸಿದಡೆ ಭವ ಹಿಂಗುವುದೇ ? ಭವ ಹಿಂಗದು. ವಿಶ್ವಾಸದಿಂದ ಚಿದ್ಭಸ್ಮವೆಂದು ಧರಿಸಿದಡೆ ಪುಣ್ಯದ ಫಲ ಪ್ರಾಪ್ತಿಯಾಗುವುದು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.