Index   ವಚನ - 88    Search  
 
ಹತ್ತಕ್ಕೆ ನೀಡಿ ಹನ್ನೊಂದಕ್ಕೆ ನೀಡದಾತ ಭಕ್ತನೇ ? ಅಲ್ಲಲ್ಲ. ಭಿಕ್ಷವ ಕೊಡುವಲ್ಲಿ ಮುಖವ ನೋಡಿ ಕೊಡುವಾತ ಭಕ್ತನೇ ? ಅಲ್ಲಲ್ಲ. ಗಣಾರಾಧನೆಯ ಮಾಡಿದಲ್ಲಿ ಒಳಗೊಂದು ಹೊರಗೊಂದು ನೀಡುವಾತ ಭಕ್ತನೇ? ಅಲ್ಲಲ್ಲ. ಅದೇನು ಕಾರಣವೆಂದರೆ ಇವರು ತಾಮಸಭಕ್ತರು. ಇಂತಪ್ಪ ತಾಮಸಭಕ್ತರಿಗೆ ಶಿವನು ಒಲಿ ಒಲಿ ಎಂದರೆ ಎಂತೊಲಿಯುವನಯ್ಯ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.