Index   ವಚನ - 104    Search  
 
ಒಂದು ಅಚ್ಚಿಗೆ ನಾಲ್ಕು ಗಾಲಿ, ಒಂದೇ ಕೀಲು. ಎಂಟು ಕಂಬದ ಮಂಟಪದಲ್ಲಿ ಮಂಚದಮೇಲೆ ಜಗನ್ಮೋಹಿನಿಯೆಂಬ ಸ್ತ್ರೀ ಇರುವಳು. ಆ ಸ್ತ್ರೀಯಳ ಮಸ್ತಕದ ಮೇಲೊಂದು ನವರತ್ನಯುಕ್ತವಾದ ವಜ್ರದ ಪೆಟ್ಟಿಗೆಯಲ್ಲಿ ಬೆಲೆಯಿಲ್ಲದ ಒಂದು ಮಾಣಿಕ ಇರುವುದು. ಆ ಮಾಣಿಕಕ್ಕೆ ಇಬ್ಬರು ಹೆಣಗಾಡುತಿರ್ಪರು. ಅವರ ಹೆಣಗಾಟವ ಕಂಡು ಅತ್ತಣ ಊರಿಂದ ಒಬ್ಬ ಪುರುಷ ಬಂದು, ನಾಲ್ಕು ಗಾಲಿಯ ತುಂಡಿಸಿ, ಕೀಲನುಚ್ಚಿ, ಅಚ್ಚು ಮುರಿದು, ಅಷ್ಟಕಂಬದ ಮಂಟಪವ ಕೆಡಿಸಿ, ಮಂಚವ ಮೆಟ್ಟಿ, ಆ ಜಗನ್ಮೋಹಿನಿಯೆಂಬ ಸ್ತ್ರೀಯಳ ಕೈ ಕಾಲು ತಲೆ ಹೊಡೆದು ಆ ಪೆಟ್ಟಿಗೆಯೊಳಗಣ ಮಾಣಿಕವ ತಕ್ಕೊಳ್ಳಬಲ್ಲರೆ ಆತನೇ ಅಸುಲಿಂಗಸಂಬಂಧಿ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.