Index   ವಚನ - 103    Search  
 
ಏಳು ತೊಲೆಗೆ ನಾಲ್ಕು ಬೋದು, ಎಂಟು ಕಂಬ, ಆರು ಬಿಗಿಜಂತಿ. ಮೂರು ಕೋಣೆಗೆ ಒಂಬತ್ತು ಬಾಗಿಲ, ಒಂದು ಕವಾಡ, ಎರಡು ಕುಲ್ಪಿ. ಇಂತೀ ಅಲುಕುಮಲಕಿನ ಅರಮನೆಯಲ್ಲಿ ಪಸುರುಕುಪ್ಪುಸ ಹಳದಿ ಶಾಲಿಯನುಟ್ಟು ಕಾಲು ಮೇಲಾಗಿ, ತಲೆ ಕೆಳಗಾಗಿ ಚಿತ್ರಾಂಗನೆಯೆಂಬ ವೇಶ್ಯಾಂಗನೆ ನಡದಾಡುತಿರ್ಪಳು. ಶ್ರೀಗುರುಚೆನ್ನಮಲ್ಲಯ್ಯಶನ ಕೂಡಬೇಕೆಂಬಣ್ಣಗಳ ಎರಡು ಬಟ್ಟೆಯಲ್ಲಿ ನಿಂದು ಕಣ್ಣುಸೊನ್ನೆಯ ಮಾಡಿ ಕರವುತಿರ್ಪಳು ನೋಡಾ. ಅಷ್ಟರಲ್ಲಿಯೇ ಕುಪ್ಪುಸ ಕಳೆದು ಶಾಲಿಯ ಹರಿದು ತಲೆಯ ಮೇಲಕ್ಕೆ ಕಾಲು ಕೆಳಯಕ್ಕೆ ಮಾಡಿ ಸೂತಕಾಗ್ನಿಯಂ ಬಿಟ್ಟು ಸೂತಕ ಇಲ್ಲದ ಅಗ್ನಿಯಿಂದ ಚಿತ್ರಾಂಗನೆಯೆಂಬ ವೇಶ್ಯಾಂಗನೆಯ ಮನೆಯಲ್ಲಿ ಸುಟ್ಟು ಎರಡು ಬಟ್ಟೆಯ ಮೆಟ್ಟಿ, ನಟ್ಟನಡುವಿನ ಬಟ್ಟೆಯ ಪಿಡಿದು, ಶ್ರೀಗಿರಿಚೆನ್ನಮಲ್ಲಯ್ಯನಲ್ಲಿಗೆ ಹೊಗಬಲ್ಲರೆ ಆತನೇ ಅಸುಲಿಂಗಸಂಬಂಧಿ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.