Index   ವಚನ - 115    Search  
 
ಹೊಲಗೇರಿಯಲ್ಲಿ ಎಲುವಿನ ಮರ ಪೂತು ಫಲವಾಗಿ, ಆ ಫಲವ ಸೇವಿಸಿದವರು ಜೀವಿಸಿದರು. ಆ ಫಲ ಸೇವಿಸದವರು ಸತ್ತು ಜೀವಿಸಿದರು. ಈ ಬೆಡಗಿನ ಕೀಲ ಬಲ್ಲರೆ ಶರಣಲಿಂಗಸಂಬಂಧಿ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.