Index   ವಚನ - 143    Search  
 
ಹಳದಿಯ ಪೂಸಿ, ವಸ್ತ್ರವ ಪೊದ್ದು, ಕಂಕಣವ ಕಟ್ಟಿ ಕಾಳಗಕ್ಕೆ ಹೋಗಿ ಮರಳಿದರೆ, ವೀರನೆಂತಪ್ಪನಯ್ಯ ? ಆವುದಾನೊಂದು ಶುನಿಗೆ ಕಣಕ ತುಪ್ಪವ ತಿನ್ನಿಸಿ ಕಾಲಗಗ್ಗರಿ ಜಂಗು ಜಲ್ಲಿ ಕೊರಳಲ್ಲಿ ಕಿರಿಗೆಜ್ಜಿಯ ಕಟ್ಟಿ ಶಿಕಾರಿಯವೈದು ಜಂಬುಕದ ಮೇಲೆ ಬಿಡಲು ಮರಳಿದರೆ ವೀರನೆಂತಪ್ಪುದಯ್ಯ ? ಹಾಗೆ ಶ್ರೀಗುರುಕಾರುಣ್ಯವ ಪಡೆದು ಲಿಂಗಾಂಗಸಂಬಂಧಿಯಾಗಿ, ಗುರುಲಿಂಗಜಂಗಮದ ನಡೆನುಡಿ ಭಕ್ತಿಯೆಂದಡೆಯು ಮನ ಹಿಮ್ಮೆಟ್ಟಿದಡೆಯು ನಿಮ್ಮ ಲಿಂಗಾಂಗಿಭಕ್ತನೆಂತಪ್ಪುವನಯ್ಯ ? ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.