ಒಳ್ಳೆ ಪದಾರ್ಥ ಬಂದಡೆ ನೀಡೆಂಬಿರಿ,
ಕೀಳು ಪದಾರ್ಥ ಬಂದಡೆ ಬೇಡೆಂಬಿರಿ.
ಕಮ್ಮಾದರೆ ನೀಡೆಂಬಿರಿ,
ಆ ಪದಾರ್ಥ ಹೆಚ್ಚಾದರೆ ಪ್ರಸಾದ[ವೆಂದು] ಕೈಕೊಂಬಿರಿ.
ಕಡ್ಡಿ ಹರಳು ಮೊದಲಾದ ಕಠಿನಪದಾರ್ಥ ಬಂದಡೆ,
ಜಿಹ್ವೆಯಲ್ಲಿ ತೊಂಬಲವನಾರಿಸಿಬಿಡುವಿರಿ.
ಮಕ್ಷಿಕ ಮೊದಲಾದ ಕ್ರಿಮಿಗಳು ಬಿದ್ದರೆ
ಆರೂ ಅರಿಯದ ಹಾಗೆ ತೆಗೆದು
ಸಿಪ್ಪದೆ ವರಸದೆ ಕದ್ದು ಚಲ್ಲುವಿರಿ.
ಇಂತಪ್ಪ ಮೂಳಹೊಲೆಯರು ಪ್ರಸಾದಿಗಳೆಂದಡೆ
ಪರಶಿವಪ್ರಸಾದಿಗಳಾದ ಶಿವಶರಣರು
ಊರ ಸೂಳೆಯರ ಹಾಟಹೊಯಿಸಿ
ತಲೆಯಬೋಳಿಸಿ ಪಟ್ಟಿಯ ತೆಗೆದು
ಅವರ ಎಡಗಾಲ ಕೆರ್ಪಿನಿಂದ ಘಟ್ಟಿಸಿ
ಮೂಡಲದಿಕ್ಕಿಗೆ ಅಟ್ಟಿದರು ಕಾಣಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
Art
Manuscript
Music
Courtesy:
Transliteration
Oḷḷe padārtha bandaḍe nīḍembiri,
kīḷu padārtha bandaḍe bēḍembiri.
Kam'mādare nīḍembiri,
ā padārtha heccādare prasāda[vendu] kaikombiri.
Kaḍḍi haraḷu modalāda kaṭhinapadārtha bandaḍe,
jihveyalli tombalavanārisibiḍuviri.
Makṣika modalāda krimigaḷu biddare
ārū ariyada hāge tegedu
sippade varasade kaddu calluviri.
Intappa mūḷaholeyaru prasādigaḷendaḍe
paraśivaprasādigaḷāda śivaśaraṇaru Ūra sūḷeyara hāṭahoyisi
taleyabōḷisi paṭṭiya tegedu
avara eḍagāla kerpininda ghaṭṭisi
mūḍaladikkige aṭṭidaru kāṇā
kāḍanoḷagāda śaṅkarapriya cannakadambaliṅga
nirmāyaprabhuve.