Index   ವಚನ - 170    Search  
 
ಶರಣರು ಶರಣರು ಎಂದು ಹೆಸರಿಟ್ಟುಕೊಂಬಿರಿ, ಶರಣರ ಪರಿ ಯಾರು ಬಲ್ಲರಯ್ಯಾ ಎಂದಡೆ : ಕಾಲಿಲ್ಲದ ಹೆಳವ, ಕೈಯಿಲ್ಲದ ಮೋಟ, ಕಣ್ಣಿಲ್ಲದ ಕುರುಡ, ತಲೆಯಿಲ್ಲದ ಮಂಡೂಕ, ಈ ನಾಲ್ವರು ಬಲ್ಲರಲ್ಲದೆ, ಉಳಿದ ಭವಭಾರಿಗಳೆತ್ತ ಬಲ್ಲರಯ್ಯಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.