Index   ವಚನ - 171    Search  
 
ನೀರಲ ಫಲ, ಉತ್ತತ್ತಿ, ಮಾವಿನ ಹಣ್ಣಿನಂತೆ ಇರುವರು ಮರ್ತ್ಯರು. ಹಲಸು, ತೆಂಗು, ದಾಳಿಂಬರದಂತೆ ಇರುವರು ಸ್ವರ್ಗದವರು. ಹಾಲು ಸಕ್ಕರೆ ಬೆಲ್ಲ ತುಪ್ಪದಂತೆ ಇರುವರು ನಿಮ್ಮವರು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.