Index   ವಚನ - 179    Search  
 
ಈರಾರುಮಣಿಯ ಲೆಕ್ಕಕ್ಕೆ ನಿಲುಕದು. ಮೂರಾರು ವೇಳೆಯಲ್ಲಿ ಮುಳುಗಿದರೆ ನಿಲುಕದು. ಒಂಬತ್ತು ಬಾಗಿಲವನಿಕ್ಕಿ ಕಣ್ಣುಮುಚ್ಚಿದಡೆ ನಿಲುಕದು. ಎರಡು ಮೂರುಳ್ಳನ್ನಕ್ಕ ನಿಲುಕದು. ಇಂತಲ್ಲದೆ ತಾನಳಿದು ನೀನೆಂಬುದ ಮರೆದವರಿಗೆ ನಿಲುಕುವುದು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.