Index   ವಚನ - 241    Search  
 
ಮನೆಯ ಕಟ್ಟುವಾತ ಪ್ರಾಣಲಿಂಗಿಯಲ್ಲ ; ಮನೆಯ ಕಟ್ಟುವಾತ ಪ್ರಾಣಲಿಂಗಿ. ಮನೆಯ ಕೆಡಿಸುವಾತ ಪ್ರಾಣಲಿಂಗಿಯಲ್ಲ ; ಮನೆಯ ಕೆಡಿಸುವಾತ ಪ್ರಾಣಲಿಂಗಿ. ಬಿಟ್ಟು ಹಿಡಿಯುವಾತ ಪ್ರಾಣಲಿಂಗಿಯಲ್ಲ ; ಬಿಟ್ಟು ಹಿಡಿಯುವಾತ ಪ್ರಾಣಲಿಂಗಿ. ಇಂತೀ ವಿಚಾರವನು ತಿಳಿಯಬಲ್ಲಾತನೆ ಚಿಲ್ಲಿಂಗಸಂಬಂಧಿ ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.