Index   ವಚನ - 245    Search  
 
ಮನೆಯೊಳಗೊಂದು ಮಾಯದ ಕೂಸು ಹುಟ್ಟಿ, ಮನೆಯ ಮಂದಿಯ ನುಂಗಿ, ಕಮಲದಲ್ಲಿ ಬಂದು, ಶಾಲಿಕುಪ್ಪುಸವ ಕಳೆದು, ಎನ್ನ ಬತ್ತಲೆ ಮಾಡಿ, ಮನೆಯ ಸುಟ್ಟು, ಬೂದಿಯ ಮೈಗೆ ಪೂಸಲು ಯೌವನವಾಯಿತ್ತು ಎನಗೆ ನೋಡಪ್ಪ. ಆ ಕೂಸಿನಾಟವ ಕಂಡು ಅವಿರಳಭಕ್ತಿಯಿಂದಪ್ಪಲೊಡನೆ ಆ ಕೂಸುಸಹಿತವಾಗಿ ನಾನೆತ್ತ ಹೋದೆನೆಂಬುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.