Index   ವಚನ - 252    Search  
 
ಕಲ್ಲಮರದ ಕೋಡಗದ ತಲೆಯೆಂಟು ಸ್ಥಾನವ ಮೆಟ್ಟಿ ತಿರಗುವ ತಲೆ ಕಾಲು ಪಕ್ಕವಿಲ್ಲದ ವಿಹಂಗನ ನಡುನೆತ್ತಿ ಸುಳಿಯೊಳು ನಿಲ್ಲಿಸಲು, ಹಾಲುಬಿಟ್ಟು ಹಾಲು ಬೇಡುವದು. ಈ ಭೇದವ ತಿಳಿಯಬಲ್ಲಡೆ ಅವರು ಲಿಂಗಸಂಬಂಧಿ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.