Index   ವಚನ - 275    Search  
 
ತಮ್ಮನ ಪ್ರಸಾದ, ಅಣ್ಣಗಲ್ಲದೆ ಅಣ್ಣನ ಪ್ರಸಾದ ತಮ್ಮಗಿಲ್ಲ. ಅಳಿಯನ ಪ್ರಸಾದ ಮಾವಗಲ್ಲದೆ ಮಾವನ ಪ್ರಸಾದ ಅಳಿಯನಿಗಿಲ್ಲ. ತಂಗಿಯ ಪ್ರಸಾದ ಅಕ್ಕಗಲ್ಲದೆ ಅಕ್ಕನ ಪ್ರಸಾದ ತಂಗಿಗಿಲ್ಲ. ಹೆಂಡತಿಯ ಪ್ರಸಾದ ಗಂಡಗಲ್ಲದೆ ಗಂಡನ ಪ್ರಸಾದ ಹೆಂಡತಿಗಿಲ್ಲ. ಮಗನ ಪ್ರಸಾದ ತಂದೆಗಲ್ಲದೆ ತಂದೆಯ ಪ್ರಸಾದ ಮಗನಿಗಿಲ್ಲ. ಹೊಲೆಯನ ಪ್ರಸಾದ ಶೀಲವಂತಗಲ್ಲದೆ ಶೀಲವಂತನ ಪ್ರಸಾದ ಹೊಲೆಯನಿಗಿಲ್ಲ. ಇಂತಪ್ಪ ಪ್ರಸಾದದ ಭೇದವ ಬಲ್ಲರೆ ಪ್ರಾಣಲಿಂಗಿ ಪ್ರಸಾದಿಯೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.