Index   ವಚನ - 293    Search  
 
ಕುರಿಯ ಹಾಲ ಮರಿಯು ಕುಡಿದು ಕುರುಬನ ಕೊಂದಿತ್ತು. ಸತ್ತ ಕುರುಬ ಎದ್ದು ಕೂಗಲು ಕೂಗಿನೊಡೆಯ ಬಂದು ಮರಿಯ ಕೊಂದು ಕುರಿಯ ಸುಲಿದು, ಹೋತನ ಕಡಿದು, ವೀರನೊಳಗೆ ಬೀರ, ಬೀರನೊಳಗೆ ವೀರ. ಉಭಯಸಂದನರಿಯದ ವೀರರೆಲ್ಲ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.