Index   ವಚನ - 304    Search  
 
ಮೂರುಗಂಟಿನ ದಂಡಿಗಿ, ಆರು ಕಾಯಿ, ಒಂಬತ್ತು ಮೆಟ್ಟು, ಬಿಳಿಯ ಕುದುರೆ, ಒಂದೆ ತಂತಿ, ನಾಲ್ಕು ಬಿರಡಿ, ಮೂರುಬೆರಳಿನಲ್ಲಿ ಡೋಹಾರನ ಕಿನ್ನರಿಯ ಹೊಡೆಯಲು, ಬ್ರಹ್ಮ ಮರ್ತ್ಯದಲ್ಲಿ ಸತ್ತು, ವಿಷ್ಣು ಸ್ವರ್ಗದಲ್ಲಿ ಸತ್ತು, ರುದ್ರ ಪಾತಾಳದಲ್ಲಿ ಸತ್ತು, ಸಕಲ ಪ್ರಾಣಿಗಳು ಬ್ರಹ್ಮಾಂಡದಲ್ಲಿ ಅಳಿದರು. ಇಂತೀ ವಿಚಿತ್ರವ ನೋಡಿ ಕಿನ್ನರಿಸಹಿತ ಡೋಹಾರ ಅಂಗೈಯಲ್ಲಿ ಬಯಲಾದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.