Index   ವಚನ - 346    Search  
 
ಪ್ರಪಂಚ ಪಾರಮಾರ್ಥ, ಲೌಕಿಕ ಪಾರಮಾರ್ಥ ಇಂತೀ ಉಭಯವನು ನಡೆಸುವಾತನೇ ಜಾಣನೆಂಬರು. ಪ್ರಪಂಚ ಪಾರಮಾರ್ಥ ಎಂದೊಡೆ ಆವುದು, ಲೌಕಿಕ ಪಾರಮಾರ್ಥ ಎಂದೊಡೆ ಆವುದು, ಬಲ್ಲಾದರೆ ಪೇಳಿರಿ, ಅರಿಯದಿದ್ದರೆ ನಮ್ಮ ನಿರ್ಮಾಯಪ್ರಭುವಿನ ಶರಣರ ಕೇಳಿರಿ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.