Index   ವಚನ - 450    Search  
 
ಕೊಟ್ಟ ಪಡಿಯನುಣ್ಣದೆ ಕೊಡದ ಪಡಿಗೆ ಹವಣಿಸುವರು. ನಿಶ್ಶಬ್ದವಾಕ್ಯವ ನುಡಿಯದೆ ಶಬ್ದವಾಕ್ಯವ ನುಡಿವರು. ಇವರಿಗೆ ಸ್ಥಿತಿ ಉತ್ಪತ್ಯದ ಮಾರ್ಗ ನಷ್ಟವಾಗದು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.