Index   ವಚನ - 465    Search  
 
ಹುಟ್ಟಲಿಲ್ಲದ ಮರದಲ್ಲಿ ಹಾರದ ಪಕ್ಷಿ ಗೂಡನಿಕ್ಕಿ, ಬ್ರಹ್ಮಾಂಡವನು ಉಭಯ ರೆಕ್ಕೆಯಿಂದ ಆವರಿಸಿಕೊಂಡು, ಆರೂ ಇಲ್ಲದ ದೇಶಕ್ಕೆ ಹಾರಿಹೋಯಿತ್ತು. ಆ ಪಕ್ಷಿಯನು ಕೊಲ್ಲದೆ ತಿಂದವನೇ ಚಿಲ್ಲಿಂಗಸಂಬಂಧಿ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.