ಬೋದಿಗೆ ನಾಲ್ಕು, ಕಂಬವೆಂಟು,
ಅರುಗುಗಾಲು ಹತ್ತು,
ತೊಲೆಯೊಂದೇ ಏರಿತ್ತು.
ಮುಚ್ಚಳವಲಗಿಗೆ ದಿಕ್ಕು ಕಾಣದೆ
ಕರ್ಮಕಾಂಡಿಗಳೆಲ್ಲರು ಕಾಮನ
ಕಾಮಾಟಕ್ಕೆ ಒಳಗಾಗಿ ಹೋದರು.
ಈ ಗುಣವ ನಾನು
ನೀನೆಂಬುದ ತಿಳಿದು ನೋಡು
ಧಾರೇಶ್ವರಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Bōdige nālku, kambaveṇṭu,
arugugālu hattu,
toleyondē ērittu.
Muccaḷavalagige dikku kāṇade
karmakāṇḍigaḷellaru kāmana
kāmāṭakke oḷagāgi hōdaru.
Ī guṇava nānu
nīnembuda tiḷidu nōḍu
dhārēśvaraliṅgavanarivudakke.