ಉದಯದಲೆದ್ದು ಗಡಗಡನೆ ನಡುಗುತ ಹೋಗಿ
ಹೂ ಗಿಡು ಪತ್ರೆಯ ಕಡಿವ ದೃಢಗೇಡಿಗಳು ನೀವು ಕೇಳಿರೊ.
ಅದು ಕಡುಪಾಪವಲ್ಲವೆ ನಿಮಗೆ?
ನಡುಗಿರೊ ಪರಧನ ಪರಸ್ತ್ರೀಯರಿಗೆ.
ನಡುಗಿರೊ ಕೊಲೆ ಹುಸಿ ಕಳವು ಪಾರದ್ವಾರ ಅತಿಕಾಂಕ್ಷಕ್ಕೆ.
ನಡುಗಿರೊ ಹರನಿಂದ್ಯ ಗುರುನಿಂದ್ಯ ಅನಾಚಾರಕ್ಕೆ,
ಇದಕ್ಕೆ ನಡುಗದೆ ಮಳಿ ಛಳಿ ಗಾಳಿಗೆ ನಡುಗಿ
ಹೂ ಗಿಡ ಪತ್ರೆಯ ಕಡಿವ ಕಡುಪಾಪಿಗಳಿಗೆ
ನಿಮಗೆ ಮೃಡಪೂಜೆಯೆಲ್ಲಿಯದೊ? ಇಲ್ಲ,
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.