Index   ವಚನ - 64    Search  
 
ಹಾಲು ಹಣ್ಣು ಬೇಳೆ ಬೆಲ್ಲದ ನೇಮಸ್ತರು ನೀವು ಕೇಳಿರೊ. ಬಾಲೆಯರ ಮೇಲಣ ಭ್ರಾಂತು ಬಿಟ್ಟುದೆ ಹಾಲನೇಮ. ಶಿವಯುಕ್ತವಲ್ಲದ ಪರಹೆಣ್ಣು ಹೊನ್ನು ಮಣ್ಣು ಬಿಟ್ಟುದೆ ಹಣ್ಣಿನ ನೇಮ. ತಾರ ತಮ್ಮುಸ ಗರಗಳು ಪಿಶಾಚಿಗಳಿದ್ದುವೆ ಬೇಳೆಯನೇಮ. ಇಂತಲ್ಲಿ ಸಲ್ಲ, ಇಲ್ಲಿ ಉಂಟುಯೆಂಬ ತಳ್ಳಿ ಬಳ್ಳಿಯ ಬಿಟ್ಟುದೆ ಬೆಲ್ಲದ ನೇಮ. ಇಂತಲ್ಲದೆ ಉಳಿದಾದ ಭ್ರಾಂತುನೇಮದವರಿಗೆ ಭಕ್ತಿ ಯುಕ್ತಿ ಮುಕ್ತಿಯೆಲ್ಲಿಯದೊ? ಇಲ್ಲ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.