Index   ವಚನ - 74    Search  
 
ರಂಡೆವೆಂಡಿರ ಮಾತ ಕೇಳಿ, ಕಂಡ ಕಂಡ ದೈವವ ಹಿಡಿದು ಬಿಡುವ ಭಂಡ ಮುಂಡ ಮೂಕೊರತಿ ಮೂಕೊರೆಯರಿರಾ ನೀವು ಕೇಳಿರೊ. ಖಂಡೇಂದುಧರನ ನಂಬಿ ಕರ್ಮಂಗಳನೀಡಾಡಿ, ಮಂಡಲದೊಳು ಪವಾಡವ ಮೆರವನ ಕೊಂಡಾಡಿ ಬದುಕಿರೊ ಬಲ್ಲವರು. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.