Index   ವಚನ - 9    Search  
 
ಮಹಿಮೆ ರುದ್ರನ ಹಂಗು, ಧ್ಯಾನ ಈಶ್ವರನ ಹಂಗು, ಜ್ಞಾನ ಸದಾಶಿವನ ಹಂಗು. ಇಂತೀ ಒಂದರ ಹಂಗಿನಲ್ಲಿ ಒಂದನರಿದು ಒಂದ ಕಾಣಿಸಿಕೊಂಡು, ಒಂದ ನಿಧಾನಿಸಿಕೊಂಡು ಒಂದರಲ್ಲಿ ಹೆರೆಹಿಂಗದೆ ನಿಂದುದು ತ್ರಿವಿಧ ಸಂಗದ ಸಗುಣ ಇಂತೀ ತ್ರಿವಿಧವನೊಂದುಗೂಡಿ ಕರ್ಪೂರದ ಸುವಾಸನೆ ಕಿಚ್ಚಿನ ತಪ್ಪಲಲ್ಲಿಯೇ ನಷ್ಟವಾದಂತೆ. ಇಂತೀ ತಾ ದೃಷ್ಟದಲ್ಲಿ ಲಕ್ಷಿಸಿ ಅಲಕ್ಷ್ಯವಾದುದು ಕೂಗಿನ ಹೊರಗು ಮಹಾಮಹಿಮ ಮಾರೇಶ್ವರಾ.